ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಸಂಪೂರ್ಣ ಸುಟ್ಟು ಕರಕಲಾದ ಬೇಕರಿ

ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಿದ್ದೇಶ್ವರ ಬೇಕರಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾಗಿದೆ‌. ಬಿಜ್ಜರಗಿ ಗ್ರಾಮದ ಅನಿಲ ಕುಮಾರ ಬಸಪ್ಪ ಹುನ್ನೂರ ಎಂಬುವರಿಗೆ ಸೇರಿದ ಬೇಕರಿ ಇದಾಗಿದ್ದು ಬೇಕರಿ‌ ತಿನಿಸು, ಫರ್ನಿಚರ್ ಸೇರಿದಂತೆ ಸಂಪೂರ್ಣ ಬೇಕರಿ ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮಂಜು ಕಲಾಲ, ಪಬ್ಲಿಕ ನೆಕ್ಸ್ಟ್, ವಿಜಯಪುರ

Edited By : Suman K
Kshetra Samachara

Kshetra Samachara

28/10/2024 04:02 pm

Cinque Terre

3.32 K

Cinque Terre

0