ವಿಜಯಪುರ ನಗರದ ಬೇಗಂ ತಲಾಬ್ ನಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಸಂಭವಿಸಿದೆ. ಮೃತ ದುರ್ದೈವಿಯನ್ನ ಅನಿರುದ್ಧ ಕಲ್ಯಾಣ ಕುಮಾರ ಸಾಮ್ರಾಣಿ (20) ಎಂದು ಗುರುತಿಸಲಾಗಿದೆ. ವಿಜಯಪುರ ನಗರದ ಹವೇಲಿ ನಿವಾಸಿಯಾಗಿದ್ದ ಅನಿರುದ್ದ ಸಾಮ್ರಾಣಿ ಗೆಳೆಯರೊಂದಿಗೆ ರಜೆ ಹಿನ್ನಲೆಯಲ್ಲಿ ತನ್ನ ಸಹೋದರ ಅನಿಕೇತ ಸಾಮ್ರಾಣಿ ಹಾಗೂ ಇನ್ನಿಬ್ಬರು ಗೆಳೆಯರೊಟ್ಟಿಗೆ ಬೇಗಂ ತಲಾಬ್ ಕಡೆ ಬಂದಿದ್ದ.
ಗೆಳೆಯರು ಹಾಗೂ ಸಹೋದರ ಬೇಡಾ ಬೇಡಾ ಎಂದರು ಈಜಲು ನೀರಿಗೆ ಇಳಿದಿದ್ದ ಅನಿರುದ್ದ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿದ್ದು ಬೋಟ್ ಮೂಲಕ ಅನಿರುದ್ದ ಶವಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಜಲನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ
PublicNext
27/12/2024 08:41 pm