ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ವಿಜಯಪುರ: ವಿಜಯಪುರ ನಗರದಲ್ಲಿ ಗದಗ ಮೂಲದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಶ್ರೀನಿವಾಸ ಯಲ್ಲಪ್ಪ ಕಿತ್ತೂರ ಎಂಬಾತ ಮಕ್ಕಳಾಗಿಲ್ಲ ಅನ್ನೋ ಖಿನ್ನತೆಗೆ ಒಳಗಾಗಿ ವಿಜಯಪುರ ನಗರದ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಇನ್ನೂ ಶ್ರೀನಿವಾಸ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ವಿಜಯಪುರಕ್ಕೆ ಬಂದಿದ್ದ ವಿಷಯ ಮನೆಯವರಿಗೆ ತಿಳಿಸಿರಲಿಲ್ಲ. ಶ್ರೀನಿವಾಸನಿಗಾಗಿ ಮನೆಯವರು ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿಜಯಪುರದಲ್ಲೂ ಹುಡುಕಾಟ ನಡೆಸಿದ್ದರು. ಆದರೆ ಲಾಡ್ಜ್ ನಲ್ಲಿ ಶವ ಪತ್ತೆಯಾಗಿದೆ. ಗೋಲ್ ಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Edited By : Ashok M
PublicNext

PublicNext

21/10/2024 07:56 pm

Cinque Terre

33.04 K

Cinque Terre

0