ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ..? - ಪೇಜಾವರ ಶ್ರೀಗಳ ಪ್ರಶ್ನೆ

ಶಿವಮೊಗ್ಗ : ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅಷ್ಟು ಖರ್ಚು ಮಾಡಿ ಜಾತಿಗಣತಿ ಮಾಡಿ ಅದನ್ನು ಮುಚ್ಚಿಡಲಾಗಿದೆ. ಜಾತ್ಯಾತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ? ಈ ಜಾತಿಗಣತಿ ಯಾಕೇ ಬೇಕು ಎಂದು ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಶ್ರೀಗಳು, ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಅಂತಿರಾ. ಇನ್ನೊಂದು ಕಡೆ ಜಾತಿಗಣತಿ ಅಂತೀರಾ. ಜಾತಿ ಗಣತಿ ಯಾಕೇ ಎನ್ನುವುದು ತಿಳಿಯುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಅಯೋಧ್ಯೆಗೆ ಹೋಗಿ ಬಂದಿದ್ದೇವೆ. ಅನೇಕ ಜನ ಭಕ್ತರು ರಾಮತಾರಕ ಹೋಮ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರದ ಉಳಿದ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನೂ ಒಂದು ವರ್ಷದಲ್ಲಿ ಶ್ರೀರಾಮ ಮಂದಿರ ಪೂರ್ಣವಾಗಲಿದೆ. ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ರಾಮ ಮಂದಿರಬೇಕು.

ರಾಮ ಮಂದಿರದಲ್ಲಿ ಸೇವಾ ಲಿಸ್ಟ್ ಇಲ್ಲ. ನಮ್ಮ ಸುತ್ತಮುತ್ತಲಿನಲ್ಲಿ ಇರುವವರಿಗೆ ನಾವು ಸಹಾಯ ಮಾಡಬೇಕು ಅದೇ ಸೇವೆ ಆಗಲಿದೆ. ಅಯೋಧ್ಯೆಗೆ ಹೋದಾಗ ನಿಮ್ಮ ಹೆಸರಿನಲ್ಲಿ ಸಹಾಯ ಮಾಡುತ್ತಿದ್ದೇನೆ ಅಂದರೆ ಅದೇ ಸೇವೆಯಾಗಿದೆ.

ನಮ್ಮ ಮಠದಿಂದ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯ ಆಗುತ್ತಿದೆ. ರಾಮನ ಮಂದಿರ ಶುರುವಾದ ಮೇಲೆ ಇಂತಹ ಕಾರ್ಯಗಳು ನಡೆಯುತ್ತಿದೆ. ನಮ್ಮ ಸುತ್ತಮುತ್ತಲಲ್ಲಿ ಇರುವ ದುಖಃತರಿಗೆ ಸೇವೆ ಮಾಡುವುದೇ ರಾಮನ ಸೇವೆ ಆಗುತ್ತದೆ. ರಾಮಮಂದಿರ ದೇಶದ ಹೆಮ್ಮೆಯ ಪ್ರತೀಕ ಎಂದು ಶ್ರೀ ಗಳು ಹೇಳಿದ್ದಾರೆ.

Edited By : Ashok M
PublicNext

PublicNext

21/10/2024 06:18 pm

Cinque Terre

15.31 K

Cinque Terre

1

ಸಂಬಂಧಿತ ಸುದ್ದಿ