ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಗರದಲ್ಲಿ ಆರ್.ಎಸ್.ಎಸ್ ಪಥಸಂಚಲನ

ಹಾಸನ: ನಮ್ಮ ಆರ್.ಎಸ್.ಎಸ್. ಇರುವುದು ಸ್ವಯಂ ಸೇವಕರನ್ನು ಮಾತ್ರ ತಯಾರು ಮಾಡುತ್ತದೆ. ಸಂಘ ಚಾರಿತ್ಯ ನಿಮಾಣ ಮಾಡುತ್ತದ್ದು, ಇಲ್ಲಿರುವವರು ಯಾವುದೇ ಕ್ಷೇತ್ರವನ್ನು ಬಿಡುವುದಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟಿದೆ ಎಂದು ಸಂಘ ಪರಿವಾರದ ವಕ್ತಾರರಾದ ಅರುಣ್ ಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಹಾಕಿ ಕ್ರೀಡಾಂಗಣದಲ್ಲಿ ಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್.) ನಗರ ಘಟಕವತಿಯಿಂದ ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನ ನಡೆಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು,

ನಮ್ಮ ಸೈನ್ಯ ಎರಡು ಆಗಿರುವುದಿಲ್ಲ. ಸೈನ್ಯ ಪ್ರಾರಂಭವಾಗಿದ್ದೆ ೧೯೨೫ ರಲ್ಲಿ. ಅದಕ್ಕಿಂತ ಎರಡು ಮೂರು ವರ್ಷಗಳ ಹಿಂದೆ ಬಹಳ ಜೋರಾಗಿ ಸೌಂಡು ಮಾಡಿ ಶುರುವಾದ ಕಮ್ಯೂನಿಸ್ಟ್ ಸಂಘಟನೆಗಳು ನೂರು ವರ್ಷ ಆಗಲಿಲ್ಲ. ೧೨ ವರ್ಷಕ್ಕೆ ತುಂಡುಗಳಾದವು. ಅನೇಕ ರಾಜಕೀಯ ಪಕ್ಷಗಳು ಇರಬಹುದು. ಎಲ್ಲಾವು ಕೂಡ ಛಿದ್ರವಾದವು. ಸಾಮಾಜಿಕ ಸಂಘಟನೆ ಎಂದರೇ ರೈತ ಸಂಘಟನೆ ಇರಬಹುದು, ದಲಿತ ಸಂಘಟನೆ ಇರಬಹುದು, ಈ ರೀತಿ ಅನೇಕ ಹೋರಾಟಗಳು ಕೂಡ ಗುಂಪುಗಳಾಗಿ ಹೊಡೆದು ಹೋಯಿತು.

ಸಂಘ ಒಂದಾಗಿ ಉಳಿದುಕೊಂಡು ಬಂದಿದೆ. ೪೦ ದೇಶಗಳಲ್ಲಿ ಸಂಘದ ಸ್ವರೂಪವಿದೆ. ನಾವುಗಳು ದೀಪಾವಳಿ, ಗಣೇಶನ ಹಬ್ಬ, ಹೋಳಿ, ವಿಜಯದಶಮಿ ಆಚರಣೆ ಮಾಡುತ್ತೇವೆ. ಇದರಿಂದ ಪ್ರೇರಣೆ ಪಡೆದ ಸ್ವಯಂ ಸೇವಕರು ಸಮಾಜದ ಹಲವು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದನ್ನು ಸಹ ಬಿಡಲಿಲ್ಲ. ಯಾವ ಕ್ಷೇತ್ರವನ್ನು ಸಂಘ ಬಿಡಲಿಲ್ಲ. ಈ ಸಂಘ ಇರುವುದು ಸ್ವಯಂ ಸೇವಕರನ್ನು ತಯಾರು ಮಾಡುವುದು ಅಷ್ಟೆ. ಸಂಘ ಚಾರಿತ್ಯ ನಿರ್ಮಾಣ ಮಾತ್ರ ಮಾಡುತ್ತದೆ. ಇಲ್ಲಿ ತಯಾರು ಆದಂತಹ ವ್ಯಕ್ತಿಗಳು ಯಾವುದೇ ಕ್ಷೇತ್ರವನ್ನು ಬಿಡುವುದಿಲ್ಲ ಎಂದರು.

ಇದೆ ವೇಳೆ ಹಿರಿಯ ವಕೀಲರಾದ ಎ. ಹರೀಶ್ ಬಾಬು, ವಿಭಾಗ ಕಾರ್ಯವಾಹ ವಿಜಯಕುಮಾರ್, ಅರವಳಿಕೆ ತಜ್ಞ ಡಾ. ಕೆ.ಎ. ನಾಗೇಶ್, ವಿಭಾಗೀಯ ಪ್ರಚಾರಕ ಮಂಜುನಾಥ್, ಗಿರೀಶ್, ನವೀನ್, ದತ್ತ, ಮೋಹನ್ ಕುಮಾರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/10/2024 07:40 pm

Cinque Terre

300

Cinque Terre

0

ಸಂಬಂಧಿತ ಸುದ್ದಿ