ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಫಿ ತೋಟದಲ್ಲಿ ಕಾಣಿಸಿಕೊಂಡ ಎರಡು ಹುಲಿಗಳು

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿರುವ ಘಟನೆ ತಾಲೂಕಿನ ಹಿರೇಕೊಳಲೆ ಗ್ರಾಮದಲ್ಲಿ ನಡೆದಿದೆ. ಶ್ರೀಕಂಠೇಗೌಡ ಎಂಬುವವರ ತೋಟದಲ್ಲಿ ಎರಡು ಹುಲಿಗಳು ಪ್ರತ್ಯಕ್ಷವಾಗಿದೆ. ಹುಲಿ ಕಂಡ ಕಾರ್ಮಿಕರು ಕೂಗಾಡಲು ಆರಂಭಿಸಿದ್ದಾರೆ.

ಆಗ ಹುಲಿಗಳು ಒಂದೊಂದು ದಿಕ್ಕಿಗೆ ಓಡಿ ಹೋಗಿವೆ ಎಂದು ತೋಟದಲ್ಲಿದ್ದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಬೀಡು ಬಿಟ್ಟಿರುವ ಅರಣ್ಯ ಸಿಬ್ಬಂದಿಗಳು ಹುಲಿ ಪತ್ತೆಗಾಗಿ ಕಾರ್ಯಚರಣೆ ನಡೆಸಿದ್ದಾರೆ. ಇಷ್ಟು ದಿನ ಕಾಡಾನೆ, ಕಾಡುಕೋಣ ಗಳ ಉಪಟಳದಿಂದ ಬೇಸತ್ತಿದ್ದ ಜನರಿಗೆ ಇದೀಗ ಹುಲಿಗಳ ಭಯ ಆರಂಭವಾಗಿದೆ.

Edited By : PublicNext Desk
Kshetra Samachara

Kshetra Samachara

20/10/2024 05:02 pm

Cinque Terre

980

Cinque Terre

0

ಸಂಬಂಧಿತ ಸುದ್ದಿ