ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರ ಬದಲಾದರೂ ಅಭಿವೃದ್ಧಿಯ ತೇರು ನಿಲ್ಲಬಾರದು - ಸಿ.ಟಿ ರವಿ

ಚಿಕ್ಕಮಗಳೂರು : ಸರ್ಕಾರ ಬದಲಾದರೂ ಅಭಿವೃದ್ಧಿಯ ತೇರು ನಿಲ್ಲಬಾರದು. ಸಂಘಟಿತ ರೂಪದಲ್ಲಿ ಪ್ರಯತ್ನ ಮಾಡಿ ವಿಶೇಷ ಅನುದಾದಾನ ತರಬೇಕಾಗುತ್ತದೆ. ಇದಕ್ಕಾಗಿ ಆಡಳಿತ ಪಕ್ಷದ ಜೊತೆಗೆ ಸಹಕಾರವನ್ನು ಕೊಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಬೇಲೂರು ರಸ್ತೆಯ ಸರ್ಕಾರಿ ಪದವೀಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಿಂದಿನ ಸರ್ಕಾರದಲ್ಲಿ ಬಿ.ಸಿ.ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ವಿವೇಕ ಯೋಜನೆಯಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಯಾವುದಾದರೂ ಎರಡು ಶಾಲೆಗಳ ಕಾಮಗಾರಿ ಪಟ್ಟಿ

ಕೊಡುವಂತೆ ಕೇಳಿದ್ದರು. ಆಗ ಸರ್ಕಾರಿ ಜೂನಿಯರ್ ಕಾಲೇಜು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪದವೀಪೂರ್ವ ಕಾಲೇಜಿಗೆ ತಲಾ 1 ಕೋಟಿ ರೂ. ಅನುದಾನವನ್ನು ಕೋರಿ ಪ್ರಸ್ತಾವನೆ ಕಳಿಸಿದ್ದೆವು. ಅದಕ್ಕೆ ಮಂಜೂರಾತಿ ದೊರೆತಿತ್ತು.

ತಮ್ಮಯ್ಯ ಅವರು ಶಾಸಕರಾದ ನಂತರ ಟೆಂಡರ್ ಕರೆದು ಇಂದು ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

20/10/2024 03:15 pm

Cinque Terre

280

Cinque Terre

0

ಸಂಬಂಧಿತ ಸುದ್ದಿ