ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಕ್ಷಣ ಒಂದು ಆಯುಧ ಅದನ್ನು ಸರಿಯಾಗಿ ಬಳಸಿದ್ದಲ್ಲಿ ಎಂತಹ ಸವಾಲನ್ನು ಎದುರಿಸಬಹುದು

ಶಿಕ್ಷಣ ಒಂದು ಆಯುಧ ಅದನ್ನು ಸರಿಯಾಗಿ ಬಳಸಿದ್ದಲ್ಲಿ ಎಂತಹ ಸವಾಲುಗಳನ್ನು ಕೂಡ ಎದುರಿಸಲು

ಮೂಡಿಗೆರೆ: ತಾಲೂಕಿನ ವಾಯ್ಸ್ ಸಂಸ್ಥೆ ಹಾಗೂ ಕಪುಚಿನ್ ಕೃಷಿ ಸೇವಾ ಕೇಂದ್ರ (ರಿ) ಬಣಕಲ್. ಸಮಾನ ಮನಸ್ಕ ಸಂಘ- ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆ ಪಟ್ಟಣದ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದಲ್ಲಿ ಇಂಗ್ಲಿಷ್ ಕಲಿಕೆಯ ಸರಳತೆಯ ಬಗ್ಗೆ ಮತ್ತು ಸರಳಿಕರಣಗಳ ಕುರಿತಂತೆ ಶಿಕ್ಷಕರಾದ ಅಜ್ಜರ್ ಅಲಿ ಖಾನ್ ರವರು ಆಟ ಮತ್ತು ಪದ್ಯ ಚಟುವಟಿಕೆಗಳ ಮೂಲಕ ವಿಶೇಷವಾಗಿ ಕಲಿಸಿಕೊಟ್ಟರು. ಕಪುಚಿನ್ ಕೃಷಿ ಸೇವಾ ಕೇಂದ್ರದ ನಿರ್ದೇಶಕರಾದ ಫಾದರ್ ಆಲ್ವಿನ್ ಡಿಸೋಜರವರು ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಮತ್ತು ಅನುಸರಿಸಬೇಕಾದ ಮಾನದಂಡಗಳು ಪರೀಕ್ಷಾ ಪೂರಕ ಮತ್ತು ಪೂರ್ವ ಸಿದ್ಧತೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಪರಿಕರಗಳ ಬಗ್ಗೆ ದೃಶ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಶಿಕ್ಷಣ ಒಂದು ಆಯುಧ ಅದನ್ನು ಸರಿಯಾಗಿ ಬಳಸಿದ್ದಲ್ಲಿ ಎಂತಹ ಸವಾಲುಗಳನ್ನು ಕೂಡ ಎದುರಿಸಲು ಅದು ಸಹಾಯ ಮಾಡುತ್ತದೆ ಪರೀಕ್ಷಾ ತಯಾರಿಯಲ್ಲಿ ದೂರದ ತಯಾರಿ ಮತ್ತು ಹತ್ತಿರದ ತಯಾರಿ ಎಂಬ ಎರಡು ವಿಷಯಗಳ ಕುರಿತಂತೆ ಸೂಕ್ತವಾದ ಮತ್ತು ಸರಿಯಾದ ಪರೀಕ್ಷಾ ತಯಾರಿ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ನನ್ನ ಸಾಮರ್ಥ್ಯ ಏನು ಮತ್ತು ಅದನು ನಾನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಅರ್ಥೈಸಿದರು.

Edited By : PublicNext Desk
Kshetra Samachara

Kshetra Samachara

19/10/2024 07:01 pm

Cinque Terre

2.68 K

Cinque Terre

0

ಸಂಬಂಧಿತ ಸುದ್ದಿ