ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಇದೇ ಪ್ರಥಮ ಬಾರಿಗೆ ನಡೆಯಿತು ಸಬ್ ಜೂನಿಯರ್ ಕೋಣಗಳ ಕಂಬಳ

ಬಂಟ್ವಾಳ: ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ದಿನಗಣನೆ ಶುರುವಾಗಿದೆ. ನವೆಂಬರ್‌ನಿಂದ ಅದ್ಧೂರಿಯಾಗಿ ಕಂಬಳ ಆರಂಭವಾಗಲಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಿದ್ದಕಟ್ಟೆ ಕೊಡಂಗೆಯಲ್ಲಿ ಸಬ್ ಜ್ಯೂನಿಯರ್ ವಿಭಾಗದ ಮಿನಿ ಕಂಬಳ ಇದೇ ಮೊದಲ ಬಾರಿಗೆ ನಡೆದು ಕಂಬಳ ಪ್ರಿಯರ ಗಮನಸೆಳೆಯಿತು.

ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಆಯೋಜಿಸಿದ್ದ ಈ ಸಬ್ ಜೂನಿಯರ್ ಕೋಣಗಳ ಕಂಬಳ ಅಕ್ಟೋಬರ್ 19ರಂದು ಸಿದ್ದಕಟ್ಟೆ ಕೊಡಂಗೆಯ ವೀರ - ವಿಕ್ರಮ ಜೋಡುಕರೆಯಲ್ಲಿ ನಡೆಯಿತು. ನೇಗಿಲು ಹಾಗೂ ಹಗ್ಗ ವಿಭಾಗದಲ್ಲಿ ಒಟ್ಟು 84 ಜೋಡಿ ಮರಿ ಕೋಣಗಳು ಭಾಗವಹಿಸಿತ್ತು.

ಸಬ್ ಜ್ಯೂನಿಯರ್ ವಿಭಾಗವೆಂದರೆ ಮರಿ ಕೋಣಗಳ ಓಟದ ಸ್ಪರ್ಧೆ. ಅವಿಭಜಿತ ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯಲ್ಲಿ ನಡೆಯುವ ಹೆಚ್ಚಿನ ಕಂಬಳ ಕೂಟಗಳಲ್ಲಿ ಸಬ್ ಜ್ಯೂನಿಯರ್ ವಿಭಾಗದ ಕೋಣಗಳಿಗೆ ಸ್ಪರ್ಧೆ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಮರಿ ಕೋಣಗಳಿಗೂ ಅವಕಾಶ ಸಿಗಬೇಕೆನ್ನುವ ಉದ್ದೇಶದಿಂದ ಸಬ್ ಜೂನಿಯರ್ ವಿಭಾಗದ ಕಂಬಳ ಕೂಟ ಆಯೋಜಿಸಲಾಗಿತ್ತು. ಸಬ್ ಜೂನಿಯರ್ ಸ್ಪರ್ಧೆಯಿಂದ ಮರಿ ಕೋಣಗಳನ್ನು ಮುಂದಿನ ಕಂಬಳ ಕೂಟ ತಯಾರು ಮಾಡಿದಂತಾಗುತ್ತದೆ. ಮರಿ ಕೋಣಗಳ ಓಟ ನೋಡಲು ಕರಾವಳಿಯ ಸಾವಿರಾರು ಮಂದಿ ಕಂಬಳ ಪ್ರೇಮಿಗಳು ಸೇರಿದ್ರು, ಕಂಬಳ ನೋಡಿ ಎಂಜಾಯ್ ಮಾಡಿದ್ರು.

ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ ಪ್ರಥಮ ಬಹುಮಾನ-ಅರ್ಧ ಪವನ್ ಚಿನ್ನದ ಪದಕ, ದ್ವಿತೀಯ ಬಹುಮಾನ- ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನ ತಲಾ 5,000 ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ. ಎಲ್ಲಾ ವಿಭಾಗದ ವಿಜೇತ ಕೋಣಗಳ ಮಾಲಕರಿಗೆ ಮತ್ತು ಓಟಗಾರರಿಗೆ ವಿಶೇಷ ಟ್ರೋಫಿ ನೀಡಿ ಗೌರವಿಸಲಾಗುತ್ತದೆ.

Edited By : Ashok M
PublicNext

PublicNext

20/10/2024 07:46 am

Cinque Terre

25.96 K

Cinque Terre

0

ಸಂಬಂಧಿತ ಸುದ್ದಿ