ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೆಕ್ಟೇರ್ಗೆ 50 ಸಾವಿರ ಪರಿಹಾರ, ಮನೆ ಬಿದ್ದವರಿಗೆ 5 ಲಕ್ಷ ನೀಡಿ - ಜೆಡಿಎಸ್ ಆಗ್ರಹ

ಕುಂದಗೋಳ : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ರೈತಾಪಿ ಜನರ ಬೆಳೆಗಳನ್ನು ಅಕ್ಷರಶಃ ನಾಶ ಮಾಡಿದೆ. ಈ ಕಾರಣ ರೈತರಿಗೆ ಪ್ರತಿ ಹೆಕ್ಟೇರ್'ಗೆ 50 ಸಾವಿರ ರೂಪಾಯಿ ಪರಿಹಾರ ಮನೆ ಬಿದ್ದವರಿಗೆ 5 ಲಕ್ಷ ಪರಿಹಾರ ಕೊಡಬೇಕು ಎಂದು ಜೆಡಿಎಸ್ ಪಕ್ಷದ ಮುಖಂಡರು ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಸಲ್ಲಿಸಿದರು.

ಈಗಾಗಲೇ ರಾಜ್ಯಾದ್ಯಂತ ಕುಂದಗೋಳ ತಾಲೂಕಿನಾದ್ಯಂತ ಬೆಳೆ ಹಾನಿಯಾಗಿರುವ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ತುಂಬಲು ನೋಟಿಸ್ ನೀಡುತ್ತಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ರೈತರನ್ನೂ ಕಾಪಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಅತಿವೃಷ್ಟಿ ಕಾರಣ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಧನ ಸಿಗಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಶಂಕರಗೌಡ ದೊಡ್ಡಮನಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಿ.ಬಿ.ಗಂಗಾಧರಮಠ, ಗುರುರಾಜ ಹಣಸಿಮರದ, ಮಹಾಬಳೇಶ ಮಾಸನಕಟ್ಟಿ, ಅಲಿ ಸಂದಿಮನಿ, ಮಲ್ಲಿಕಾರ್ಜುನ ತೆಂಬದಮನಿ, ನಿರಂಜನಯ್ಯ ಮಣಕಟ್ಟಿಮಠ, ದಾದಾಪೀರ್ ರಾಟಿಮನಿ, ವಿನಾಯಕ ಗಾಡಿ ವಡ್ಡರ ಉಪಸ್ಥಿತರಿದ್ದರು.

Edited By : Ashok M
Kshetra Samachara

Kshetra Samachara

19/10/2024 02:54 pm

Cinque Terre

22.61 K

Cinque Terre

1

ಸಂಬಂಧಿತ ಸುದ್ದಿ