ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕ್ಫ್ ಭೂಮಿಯಲ್ಲಿ ಹೊಸ ಸಂಸತ್​ ಭವನ ನಿರ್ಮಾಣ : ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ

ಗುವಾಹಟಿ : ವಕ್ಫ್ ಮಂಡಳಿಯ ಜಾಗದಲ್ಲಿ ಹೊಸ ಸಂಸತ್ತು ನಿರ್ಮಾಣವಾಗಿದೆ ಎಂದು ವಕ್ಫ್ ತಿದ್ದುಪಡಿ ಮಸೂದೆ ಕುರಿತು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಸ್ಲಾಂ ಧರ್ಮದ ಅನುಯಾಯಿಗಳಿಗೆ ತೊಂದರೆ ನೀಡುವುದು ಬಿಜೆಪಿಯ ಉದ್ದೇಶವಾಗಿದೆ. ನಮ್ಮ ಪೂರ್ವಜರು ಇಡೀ ದೇಶದ ಪ್ರತಿ ಬೀದಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಸಂಸತ್‌ ಕಟ್ಟಡ, ರಾಷ್ಟ್ರ ರಾಜಧಾನಿಯ ವಸಂತ ವಿಹಾರ್ ಸುತ್ತಮುತ್ತ ವಿಮಾನ ನಿಲ್ದಾಣದವರೆಗಿನ ಪ್ರದೇಶ ವಕ್ಫ್‌ ಆಸ್ತಿ ಎಂದು ಹೇಳಿದ್ದಾರೆ. ಅನುಮತಿ ಇಲ್ಲದೆ ವಕ್ಫ್ ಭೂಮಿಯನ್ನು ಬಳಸುವುದು ಸರಿಯಲ್ಲ. ವಕ್ಫ್‌ ಬೋರ್ಡ್‌ ಸಮಸ್ಯೆ ಇತ್ಯರ್ಥವಾದ ಕೂಡಲೇ ತಮ್ಮ ಸಚಿವಾಲಯದ ಜಾಗವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

15 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಅಜ್ಮಲ್ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ನಾನು 15 ವರ್ಷಗಳ ಕಾಲ ಸಂಸತ್ತಿನಲ್ಲಿದ್ದೆ ಮತ್ತು ವಕ್ಫ್ ಭೂಮಿಯಲ್ಲಿ ಸಂಸತ್ತು ನಿರ್ಮಿಸಲಾಗಿದೆ ಎಂಬ ವದಂತಿಗಳಿವೆ. ಅದಕ್ಕಾಗಿಯೇ ನಾನು ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದೇನೆ ಎಂದರು.

ವಕ್ಫ್‌ ಮಸೂದೆಯನ್ನು ಪ್ರಶ್ನಿಸಲು ಜಮಿಯತ್ ಉಲೇಮಾ-ಎ-ಹಿಂದ್ ಅಸ್ಸಾಂನಲ್ಲಿ ವಕ್ಫ್ ಬೋರ್ಡ್ ಜಮೀನುಗಳ ಸಮೀಕ್ಷೆಯನ್ನು ನಡೆಸಲಿದೆ. ವಕ್ಫ್ ಮಸೂದೆಯ ಮೇಲಿನ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

Edited By : Nirmala Aralikatti
PublicNext

PublicNext

16/10/2024 10:21 pm

Cinque Terre

19.41 K

Cinque Terre

22

ಸಂಬಂಧಿತ ಸುದ್ದಿ