ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ರಾಂಪುರ ಬಳಿ ಚಿರತೆ ಪ್ರತ್ಯಕ್ಷ - ಆತಂಕದಲ್ಲಿ ಸ್ಥಳೀಯರು

ಮೊಳಕಾಲ್ಮುರು: ರಾಂಪುರ ಸಮೀಪದ ಹೊಸಕೆರೆ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

ಗ್ರಾಮದಿಂದ 150 'ಎ' ಹೆದ್ದಾರಿಯ ತಿರುವಿನ ಮೂಲಕ ಗುಡೇಕೋಟೆ ಸಂಪರ್ಕ ರಸ್ತೆಯಲ್ಲಿರುವ ಹೊಸಕೆರೆ ಬಳಿ ಚಿರತೆಯೊಂದು ಮಂಗಳವಾರ ಸಂಜೆ 5 ಗಂಟೆ ಸುಮಾರಿನಲ್ಲಿ ವೇಗವಾಗಿ ರಸ್ತೆ ದಾಟುತ್ತಿರುವುದು ಕಾಣಸಿಕ್ಕಿದೆ. ಸಮೀಪದ ವಡೇರಹಳ್ಳಿಯ ಮೈನಿಂಗ್ ಫ್ಯಾಕ್ಟರಿಗೆ ಹೋಗುವ ಕಾರ್ಮಿಕರು ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

3 ತಿಂಗಳ ಹಿಂದೆ ಸಮೀಪದ ದೇವಸಮುದ್ರ ಬೆಟ್ಟದ ಮೇಲೆ 2 ಚಿರತೆಗಳು ಕಾಣಿಸಿಕೊಂಡಿದ್ದವು. ರಸ್ತೆ ದಾಟುತ್ತಿರುವ ಚಿರತೆ ಓಡಾಡಿದ ಈ ಪ್ರದೇಶಕ್ಕೆ ನಿತ್ಯ ಜಾನುವಾರು, ಕುರಿ ಮೇಯಿಸಲು ಗ್ರಾಮಸ್ಥರು ಹೋಗುತ್ತಾರೆ. ಇದೀಗ ಚಿರತೆ ಕಾಣಿಸಿಕೊಂಡಿರುವ ಕಾರಣ ಆತಂಕಕ್ಕೀಡಾಗಿದ್ದಾರೆ.

Edited By : Suman K
PublicNext

PublicNext

16/10/2024 11:43 am

Cinque Terre

21.98 K

Cinque Terre

0

ಸಂಬಂಧಿತ ಸುದ್ದಿ