ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಮೀಸಲಾತಿ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರಕ್ಕೆ ಬರಬೇಕು', ಇಲ್ಲವಾದರೇ ಹೋರಾಟ ಕಟ್ಟಿಟ್ಟ ಬುತ್ತಿ!

ಹುಬ್ಬಳ್ಳಿ: ಮೀಸಲಾತಿ ಗುರಿಯನ್ನು ಮುಟ್ಟುವವರಿಗೂ ನಾವು ಹೋರಾಟ ಬಿಡುವುದಿಲ್ಲ. ಈಗಾಗಲೇ ಏಳು ಹಂತಗಳ ಹೋರಾಟ ಮಾಡಿದ್ದೇವೆ.ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನಮಗಿತ್ತು. ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದ್ರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ವಕೀಲರ ಸಮಾವೇಶ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ. ದಸರಾ ಮುಗಿದ ಮೇಲೆ ಸಭೆ ಕರೆಯುತ್ತೆನೆಂದು ತಿಳಿಸಿದ್ದರು. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಬೇಡ ಎಂದು ಮನವಿ ಮಾಡಿದ್ದರು. ಈಗ ಅಕ್ಟೋಬರ್ 18 ಲಿಂಗಾಯತ ಪಂಚಮಸಾಲಿ ಸಮುದಾಯದ ಸಭೆ ಕರೆದಿದ್ದಾರೆ ಎಂದರು.

ಇನ್ನೂ ಈ ಸಭೆಗೆ 11 ಜನ ಹಿರಿಯ ವಕೀಲರನ್ನ ನೇಮಕ ಮಾಡಲಾಗಿದೆ. ಈ ವಕೀಲರು ಸಿದ್ದರಾಮಯ್ಯನವರು ನಡೆಸುವ ಸಭೆಯಲ್ಲಿ ಭಾಗಿಯಾಗುತ್ತಾರೆ. ಬೆಳಗಾವಿಯಲ್ಲಿ ಸೇರಿದಂತೆ ರಾಜ್ಯದ ಪಂಚಮಸಾಲಿ ಸಮುದಾಯದ ಎಲ್ಲಾ ವಕೀಲರು ಬೆಂಗಳೂರಿಗೆ ಬರಬೇಕು. ವಕೀಲರ ಹೋರಾಟಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಕರೆದಿದ್ದಾರೆ. ನಮ್ಮ ಮನವಿಗೆ ಸ್ಪಂದನೆ ಮಾಡದೆ ಹೋದ್ರೆ ನಾವು ಮತ್ತೆ ಹೋರಾಟ ಮಾಡುತ್ತೆವೆ ಎಂದು ಅವರು ಹೇಳಿದರು.

ಇನ್ನೂ ಅವತ್ತಿನ ಸಭೆಗೆ ಎಲ್ಲಾ ಶಾಸಕರು ಬರಬೇಕು. ನಿಮ್ಮ ಅವಧಿಯಲ್ಲಿ ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು. ಸ್ವತಂತ್ರ ಹೋರಾಟಗಾರ್ತಿ ಚೆನ್ನಮ್ಮನ ವಂಶಸ್ಥರಿಗೆ ನ್ಯಾಯ ಕೊಡಿಸುವ ಕೆಲಸವನ್ನ ಸಿದ್ದರಾಮಯ್ಯನವರು ಮಾಡಲಿ. ಸಿದ್ದರಾಮಯ್ಯನವರು ಈಗಾಗಲೇ ಎರಡೂ ಬಾರಿ ಕೊಟ್ಟ ಮಾತನ್ನ ತಪ್ಪಿದ್ದಾರೆ. ಆದ್ರೆ ಈ ಬಾರಿಗೆ ಕೊಟ್ಟ ಮಾತನ್ನ ಮುಖ್ಯಮಂತ್ರಿ ಉಳಿಸಿಕೊಂಡಿದ್ದಾರೆ. ಈಗಾಗಲೇ ನಮ್ಮ‌ ಸಮಾಜದ ಶಕ್ತಿ ಪ್ರದರ್ಶನ ಮಾಡಲಾಗಿದೆ. ಉಗ್ರವಾದ ಹೋರಾಟಕ್ಕೆ ಈ ಸರ್ಕಾರ ಅವಕಾಶ ಮಾಡಿಕೊಡಬಾರದು.

ಈ ಸಭೆಯಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟ ಉತ್ತರ ಸಿಗದಿದ್ರೆ ಮತ್ತೆ ಹೋರಾಟ ಮಾಡುತ್ತೇವೆ. ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಹೋರಾಟ ಮಾಡುತ್ತೇವೆ. ಮೀಸಲಾತಿ ವಿಚಾರದಲ್ಲಿ ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಪ್ರತ್ಯೇಕ ಧರ್ಮ ಆಗಿನ ಸಂದರ್ಭಕ್ಕೆ ಮುಖ್ಯಮಂತ್ರಿ ಮಾಡಿದ್ದರು. ಈಗ ಮೀಸಲಾತಿ ಸಿದ್ದರಾಮಯ್ಯ ನೀಡಲಿ. ಮುಂದಿನ‌ ಮೀಸಲಾತಿ ಹೋರಾಟದಲ್ಲಿ ಸ್ವಾಮೀಜಿ ಮಾತ್ರ ವೇದಿಕೆ ಮೇಲೆ ಇರಬೇಕೆಂಬ ತೀರ್ಮಾನ ಆಗಿದೆ ಎಂದು ಅವರು ಮಾಹಿತಿ ನೀಡಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/10/2024 03:38 pm

Cinque Terre

46.91 K

Cinque Terre

0

ಸಂಬಂಧಿತ ಸುದ್ದಿ