ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಮಕ್ಕಳಿಗೆ ತಾವೇ ಊಟ ಬಡಿಸಿ ಕೈತುತ್ತು ತಿನ್ನಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ನವರಾತ್ರಿ 9 ನೇ ದಿನದಂದು ಸಚಿವೆ ಪ್ರಭಾ ಮಲ್ಲಿಕಾರ್ಜುನ್ ವಿಶೇಷ ಪೂಜೆ ನೆರವೇರಿಸಿ ನಂತರ ಮಕ್ಕಳಿಗೆ ತಾವೇ ಊಟ ಬಡಿಸಿ ಕೈತುತ್ತು ತಿನ್ನಿಸಿದ್ದಾರೆ..

ತಮ್ಮ ನಿವಾಸಕ್ಕೆ ಮಕ್ಕಳನ್ನ ಕರೆಯಿಸಿ ಊಟ ಬಡಿಸಿ ಕೈತುತ್ತು ತಿನ್ನಿಸಿದ ಸಂಸದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕನ್ಯಾ ಪೂಜೆ ನೆರವೇರಿಸಿದ್ರು. ಶಾಮನೂರು ಕುಟುಂಬ ಪ್ರತಿವರ್ಷ ಕನ್ಯಾಪೂಜೆ ಆಚರಿಸುತ್ತೆ. 12 ವರ್ಷದೊಳಗಿನ 9 ಜನ ಹೆಣ್ಣುಮಕ್ಕಳನ್ನು ಮನೆಗೆ ಕರೆದು ಅವರನ್ನು ಪೂಜಿಸುವ ಸಂಪ್ರದಾಯ ಇದೆ. ಕನ್ಯಾಕುಮಾರಿ ಅಥವಾ ಕನ್ಯಾ ಮುತ್ತೈದೆಯರು ಎಂದು ಅವರನ್ನು ಕರೆಯಲಾಗುತ್ತದೆ. ಇವರು ನವದುರ್ಗೆಯರನ್ನು ಪ್ರತಿನಿಧಿಸುತ್ತಾರೆ ಅನ್ನೋ ನಂಬಿಕೆ ಇದೆ..

ಪೂರ್ವಾಭಿಮುಖವಾಗಿ ಮನೆಯ ಮುಂಬಾಗಿಲಿನಲ್ಲಿ ಮಕ್ಕಳ ಪಾದಪೂಜೆ ಮಾಡುವ ವಿಶೇಷ ಆಚರಣೆ ಇದೆ. ಹಸಿರು ಬಟ್ಟೆಗಳು, ಹಸಿರು ಬಳೆ ಮತ್ತು ಮಲ್ಲಿಗೆ ಹೂವನ್ನು ನೀಡಿ ಗೌರವಿಸಿ ಪೂಜೆ ಸಲ್ಲಿಸುತ್ತಾರೆ.

ಈ ವೇಳೆ ಮಗುವೊಂದಕ್ಕೆ ಸ್ವತಃ ತಾವೇ ಊಟ ಮಾಡಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್. ಊಟ ಮಾಡಲು ಹಟ ಹಿಡಿದ ಮಗುವಗೆ ಸಮಾಧಾನದಿಂದ ಸಂಸದೆ ಊಟ ಮಾಡಿಸಿದ್ದಾರೆ.

Edited By : Nagesh Gaonkar
PublicNext

PublicNext

11/10/2024 07:01 pm

Cinque Terre

34.74 K

Cinque Terre

0