ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ವಾನ ಪ್ರಿಯ ರತನ್ ಟಾಟಾ : ಅಗಲಿದ ಯಜಮಾನನಿಗೆ ಅಂತಿಮ ನಮನ ಸಲ್ಲಿಸಿದ 'ಗೋವಾ'

ಮುಂಬೈ : ತಮ್ಮ ಸರಳ ವ್ಯಕ್ತಿತ್ವದಿಂದಲೇ ಮನೆ ಮಾತಾಗಿರುವ ದೇಶದ ಖ್ಯಾತ ವಾಣಿಜ್ಯೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ. ರತನ್ ಟಾಟಾ ಅವರಿಗೆ ನಾಯಿ ಎಂದರೆ ತುಂಬಾನೇ ಪ್ರೀತಿ.

ತಮ್ಮ ಸಾಕು ನಾಯಿಗಳೊಂದಿಗೆ, ಬೀದಿ ನಾಯಿಗಳಿಗೂ ಅಷ್ಟೇ ಪ್ರೀತಿ ತೋರಿಸುತ್ತಿದ್ದರು. ಬೀದಿ ನಾಯಿಗಳಿಗಾಗಿ ಆರೈಕಾ ಕೇಂದ್ರವನ್ನು ತೆರೆದಿದ್ದರು. ಇನ್ನೂ ಅವರ ಸಾಕು ನಾಯಿ ಮೇಲಿನ ಅಪಾರದ ಪ್ರೀತಿಯ ಸಲುವಾಗಿ ಬಿಟ್ರನ್ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನೇ ತಿರಸ್ಕರಿಸಿದರು.

ರತನ್ ಟಾಟಾ ತಮ್ಮ ಮಾನೆಯಲ್ಲಿ ಟೀಟೋ, ಟ್ಯಾಂಗೋ ಎಂಬ ಎರಡು ನಾಯಿಗಳನ್ನು ಸಾಕಿದ್ದರು. ಅಷ್ಟೇ ಅಲ್ಲ, ರತನ್ ಟಾಟಾರ ಕಚೇರಿಯಲ್ಲಿ 'ಗೋವಾ' ಎಂಬ ಶ್ವಾನವನ್ನೂ ಸಾಕಿದ್ದರು. ತಮ್ಮ ಕೊನೆಯ ಕಾಲದಲ್ಲೂ ಕೂಡ ನಾಯಿಗಳಿಗೆ ಅಪಾರ ಪ್ರೀತಿ ತೋರುತ್ತಿದ್ದ ರತನ್ ಟಾಟಾ ಅವರ ಬದುಕಿನಲ್ಲಿ ಶ್ವಾನಗಳೊಂದಿಗೆ ಬಹಳ ಅಪರೂಪದ ಕ್ಷಣಗಳನ್ನು ಕಳೆದಿದ್ದಾರೆ ಎಂದು ರತನ್ ಶ್ವಾನ ಪ್ರೀತಿಯ ಬಗ್ಗೆ ಅವರ ಆಪ್ತ ವಲಯದವರು ಮೆಲುಕು ಹಾಕಿದ್ದಾರೆ.

ಇಂದು ಮಾಲೀಕನನ್ನು ಕಳೆದುಕೊಂಡ ಶ್ವಾನಗಳು ಕಣ್ಣೀರಿಟ್ಟಿವೆ. ಇನ್ನು "ಗೋವಾ' ಹೆಸರಿನ ನಾಯಿ ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದು ನೋಡುಗರ ಕಣ್ಣಾಲೆಯನ್ನು ಒದ್ದೆಯಾಗಿಸಿದೆ.

ಟಾಟಾ ನಾಯಿಗೆ 'ಗೋವಾ' ಎಂದು ಏಕೆ ಹೆಸರಿಡಲು ಕಾರಣ ಒಮ್ಮೆ ರತನ್‌ ಟಾಟಾ ಗೋವಾಗೆ ತೆರಳಿದಾದ ಬೀದಿ ನಾಯಿಯೊಂದು ಅವರನ್ನು ಹಿಂಬಾಲಿಸಿ ಬರುವುದನ್ನು ಗಮನಿಸಿ ಅವರು ಆ ನಾಯಿಯನ್ನು ದತ್ತು ಪಡೆದು ಮುಂಬೈಗೆ ತಂದು ಅದಕ್ಕೆ ಗೋವಾ ಎಂದು ಹೆಸರಿಟ್ಟಿದ್ದರು.

Edited By : Nirmala Aralikatti
PublicNext

PublicNext

10/10/2024 05:47 pm

Cinque Terre

33.75 K

Cinque Terre

1