ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಪಾಲಾಗಿರುವ ದರ್ಶನ್ ಅವರಿಗೆ ಬೆನ್ನು ನೋವು ಮಿತಿಮೀರಿದೆ.
ಜಾಮೀನಿಗಾಗಿ ಪರದಾಡುತ್ತಿರುವ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಈ ಮೊದಲು ತಪಾಸಣೆಯನ್ನು ನಿರಾಕರಿಸಿದ್ದರು. ಆದರೆ ಈಗ ಬೆನ್ನು ನೋವಿನಿಂದಾಗಿ ಮೂಳೆಯಲ್ಲಿ ಊತದ ಸಮಸ್ಯೆ ಕಾಣಿಸಿಕೊಂಡಿದೆ. ಈ ಪರಿಣಾಮ, ಸೆಂಟ್ರಲ್ ಜೈಲು ವೈದ್ಯರಿಂದ 10 ನಿಮಿಷಗಳ ಕಾಲ ದರ್ಶನ್‌ಗೆ ಆರೋಗ್ಯ ತಪಾಸಣೆ ಮಾಡಲಾಗಿದೆ.
ಬೆನ್ನು ನೋವಿಗೆ ದರ್ಶನ್ ಸರ್ಜರಿಗೆ ಒಳಗಾಗಲೇ ಬೇಕಿದೆ. ಸರ್ಜರಿ ಮಾಡಿಸದಿದ್ದರೆ ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ದರ್ಶನ್ ಬಳ್ಳಾರಿಯಲ್ಲಿ ಸರ್ಜರಿಗೆ ರೆಡಿ ಇಲ್ಲ. ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಹಠ ಹಿಡಿದ್ದಾರೆ. ಸದ್ಯ ಬೆನ್ನು ನೋವಿಗೆ ಸ್ಕ್ಯಾನಿಂಗ್ ಹಾಗೂ ಸರ್ಜರಿ ಮಾಡಿಸಲು ಎ2 ದರ್ಶನ್ ನಿರಾಕರಿಸಿದ್ದಾರೆ. ದರ್ಶನ್ ಹೇಳಿಕೆಯನ್ನು ಜೈಲಧಿಕಾರಿಗಳು ರೆಕಾರ್ಡ್ ಮಾಡಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಆದರೆ ತಮ್ಮ ಮೇಲೆ ಬರಬಾರದು ಎನ್ನುವ ಕಾರಣಕ್ಕೆ ಜೈಲು ಅಧಿಕಾರಿಗಳ ಈ ರೀತಿ ಮಾಡಿದ್ದಾರೆ. ದರ್ಶನ್ ಒಪ್ಪಿದರೆ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಲು ಸಿದ್ಧತೆ ನಡೆದಿದೆ.
ದರ್ಶನ್ ಅವರ ಆರೋಗ್ಯ ಸಮಸ್ಯೆ ದಿನಕಳೆದಂತೆ ಹೆಚ್ಚುತ್ತಿದೆ. ಇದನ್ನು ಅವರ ಪರ ವಕೀಲರು ಕೋರ್ಟ್ ಮುಂದೆ ಇಡೋ ಸಾಧ್ಯತೆ ಇದೆ. ಇದನ್ನು ಆಧರಿಸಿ ಜಾಮೀನು ನೀಡುವಂತೆ ಅವರು ಬೇಡಿಕೆ ಇಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
PublicNext
05/10/2024 11:04 pm