ಥಲಪತಿ ವಿಜಯ್ ಹಾಗೂ ನಟಿ ಪೂಜಾ ಹೆಗ್ಡೆ ಅಭಿನಯದ ತಾತ್ಕಾಲಿಕವಾಗಿ ಹೆಸರಿಸಲಾದ ಥಲಪತಿ 69 ಸಿನಿಮಾದ ಮುಹೂರ್ತ ಪೂಜೆಯು ನಿನ್ನೆ ನೆರವೇರಿದೆ.ಈ ಸಿನಿಮಾವು ವಿಜಯ್ ಅಭಿನಯದ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ.ಪೂಜಾ ಮತ್ತು ವಿಜಯ್ ಒಟ್ಟಿಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು ಈ ಹಿಂದೆ 2022 ರ ಹಿಟ್ ಚಲನಚಿತ್ರ ಬೀಸ್ಟ್ ನಲ್ಲಿ ಒಟ್ಟಿಗೆ ನಟಿಸಿದ್ದರು.ಪೂಜಾ ತನ್ನ ಇನ್ಸ್ಟಾ ಗ್ರಾಂ ನಲ್ಲಿ ಮುಹೂರ್ತ ಪೂಜೆಯ ಹಲವಾರು ಫೊಟೋಗಳನ್ನು ಹಂಚಿಕೊಂಡಿದ್ದಾರೆ.ಚಿತ್ರದಲ್ಲಿ ನಟ,ನಟಿ ವೈಟ್ ಆಂಡ್ ವೈಟ್ ಬಟ್ಟೆ ಧರಿಸಿದ್ದು ಮಿಲಿಯನ್ ಡಾಲರ್ ಸ್ಮೈಲ್ ಇವರಿಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು.ಬಾಬಿ ಡಿಯೋಲ್ ಕೂಡ ಈ ವೇಳೆ ಹಾಜರಿದ್ದರು.ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದಳಪತಿ 69 - ನವರಾತ್ರಿಯ ಎರಡನೇ ದಿನದಂದು ನಡೆದ ಮಹೂರ್ತ ಪೂಜೆಯೊಂದಿಗೆ ಪ್ರಾರಂಭವಾಗಿ,ಇಂದಿನಿಂದ ಶೂಟಿಂಗ್ ಆರಂಭವಾಗಲಿದೆಯಂತೆ.ದಳಪತಿ 69 ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ನಿರ್ಮಾಣ ಮಾಡಲಿದ್ದು ಎನ್‌ಕೆ ಲೋಹಿತ್ ಮತ್ತು ಜಗದೀಶ್ ಪಳನಿಸಾಮಿ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಥಳಪತಿ 69 ಮುಂದಿನ ವರ್ಷ ಅಕ್ಟೋಬರ್ 25 ರಂದು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸಲಿದೆ.
PublicNext
05/10/2024 04:59 pm