ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುರ್ತು ಚಿಕಿತ್ಸಾ ಕೋಣೆಗೆ ಚಪ್ಪಲಿ ನಿಷೇಧ ಅಂದಿದ್ದಕ್ಕೆ ವೈದ್ಯರಿಗೆ ಯದ್ವಾ ತದ್ವಾ ಹೊಡೆದ ರೋಗಿ ಸಂಬಂಧಿಕರು

ತುರ್ತು ಚಿಕಿತ್ಸಾ ಕೋಣೆಗೆ ಪ್ರವೇಶಿಸುವ ಮೊದಲು ಚಪ್ಪಲಿ ತೆಗೆಯುವಂತೆ ವೈದ್ಯರು ಹೇಳಿದ್ದಕ್ಕೆ ಕೋಪಗೊಂಡ ರೋಗಿಯ ಸಂಬಂಧಿಕರು ವೈದ್ಯರಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗುಜರಾತ್ ನ ಸಿಹೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ತಲೆಗೆ ಪೆಟ್ಟು ಬಿದ್ದಿದ್ದ ಮಹಿಳೆಯ ಚಿಕಿತ್ಸೆಗಾಗಿ ಆರೋಪಿಗಳು ಆಸ್ಪತ್ರೆಗೆ ಆಗಮಿಸಿದ್ದರು, ಈ ವೇಳೆ ಡಾ.ಜೈದೀಪ್‌ಸಿನ್ಹ್ ಗೋಹಿಲ್ ಮೇಲೆ ದಾಳಿ ಮಾಡಿದ್ದಾರೆ.ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ತುರ್ತು ಚಿಕಿತ್ಸಾ ಕೊಠಡಿಯೊಳಗಿನ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಹಾಸಿಗೆ ಮೇಲೆ ಮಲಗಿದ್ದ ಮಹಿಳೆ ಹಾಗೂ ಅಲ್ಲೇ ಚಿಕಿತ್ಸೆ ಕೊಡುತ್ತಿದ್ದ ನರ್ಸ್‌ ಮಧ್ಯ ಪ್ರವೇಶಿಸಿದರೂ ಪರಿಸ್ಥಿತಿ ಹತೋಟಿಗೆ ಸಿಗದೇ ಕೋಣೆಯಲ್ಲಿದ್ದ ಔಚಧಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

Edited By : Suman K
PublicNext

PublicNext

20/09/2024 02:12 pm

Cinque Terre

29.32 K

Cinque Terre

6

ಸಂಬಂಧಿತ ಸುದ್ದಿ