ಧಾರವಾಡ: ಧಾರವಾಡದ ಕೆಯುಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಗುರುವಾರ (ಸೆ.19)ದಂದು 2ನೇ ತ್ರೈಮಾಸಿಕ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಹೀಗಾಗಿ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆವಿ ಮಾರ್ಗಗಳಲ್ಲಿ ಸೆಪ್ಟೆಂಬರ್ 19ರಂದು ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನೆಹರು ನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣ ನಗರ, ವಿಜಯಾನಂದ ನಗರ, ಶ್ರೀನಗರ, ಮಹಾಂತ ನಗರ, ಮಂಜುನಾಥ ಕಾಲೊನಿ, ಕೆಲಗೇರಿ ರೋಡ, ಶಿವಶಕ್ತಿ ನಗರ, ಶಾಂತಿನಿಕೇತನ ನಗರ, ಪ್ರಶಾಂತ್ ನಗರ, ಸಾಧನಕೇರಿ, ಬ್ರಹ್ಮ ಚೇತನ ಪಾರ್ಕ್, ಬೇಂದ್ರೆ ಭವನ, ಶಿರಡಿ ಸಾಯಿಬಾಬಾ ಕಾಲೊನಿ, ಆಂಜನೇಯ ನಗರ, ಸಿಲ್ವರ್ ಆರ್ಚಡ್, ಸಾಯಿ ನಗರ, ರೆವಿನ್ಯೂ ಕಾಲೊನಿ, ಸಿಬಿ ನಗರ, ಯುಸಿಬಿ ನಗರ, ಮಿಚಿಗನ್ ಕಂಪೌಂಡ್, ಚೈತನ್ಯ ನಗರ, ಚನ್ನಬಸವೇಶ್ವರ ನಗರ, ವಿನಾಯಕ ನಗರ, ಶಿವಗಿರಿ, ಪಾವಟೆ ನಗರ, ಕೆಯುಡಿ, ಬಾರಾಕೊಟ್ರಿ, ಡಿಸಿ ಕಂಪೌಂಡ್, ಮಾಳಮಡ್ಡಿ, ಸರೋವರ ನಗರ, ಲೋಟಸ್ ಪಾರ್ಕ್, ಸಪ್ತಾಪೂರ, ಕೆಸಿಡಿ, ಜಯ ನಗರ, ಪಾವಟೆ ನಗರ, ನವೋದಯ ನಗರ, ಸಲಕಿನಕೊಪ್ಪ, ಮುಗದ, ಬಸವೇಶ್ವರ, ರಾಮಾಪುರ, ಕ್ಯಾರಕೊಪ್ಪ, ಹುಲಕಟ್ಟಿ ಮುಗದ, ಕಲ್ಲಾಪೂರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಕೆಲಗೇರಿ ರೋಡ್, ಮಂಜುನಾಥ ಕಾಲೊನಿ ಮತ್ತು ಕೋರ್ಟ್ ವೃತ್ತದಿಂದ ಆಲೂರು ವೆಂಕಟರಾವ್ ವೃತ್ತವರೆಗಿನ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
Kshetra Samachara
18/09/2024 09:11 pm