ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜಿಲ್ಲಾಧಿಕಾರಿಗಳಿಂದ ಅವಮಾನ; ಶಾಸಕ ಉಮಾನಾಥ ಕೋಟ್ಯಾನ್ ಆಕ್ರೋಶ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ರವರಿಗೆ ಸಂವಿಧಾನಾತ್ಮಕವಾಗಿ ಒದಗಿಸಲ್ಪಟ್ಟ ಹಕ್ಕುಬಾಧ್ಯತೆಗಳನ್ನು ನೀತಿನಿಯಮಗಳನ್ನು ಉಲ್ಲಂಘಿಸಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಧಿಕೃತ ಸರಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡದೆ ಆಹ್ವಾನಿಸದೆ, ನಿರ್ಲಕ್ಷಿಸಿ, ಅವಮಾನಿಸಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ

ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ದ.ಕ.ಜಿಲ್ಲಾ ಜಿಲ್ಲಾಧಿಕಾರಿಯವರು ಮುಲ್ಕಿ ಮೂಡುಬಿದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕೃತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳು, ಯೋಜನಾನುಷ್ಠಾನಗಳು, ಸಾರ್ವಜನಿಕ ಸಂಪರ್ಕ ಸಭೆಗಳು ಸೇರಿದಂತೆ ಬಹುತೇಕ ಕಾರ್ಯಕ್ರಮಗಳಿಗೆ ಆಹ್ವಾನಿಸದೇ ಏಕಪಕ್ಷೀಯವಾಗಿ ತಮಗೆ ಇಷ್ಟಬಂದಂತೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಸಾಂವಿಧಾನಿಕವಾಗಿ ಶಾಸಕರಿಗೆ ಒದಗಿಸಿಲ್ಪಟ್ಟ ಹಕ್ಕುಬಾಧ್ಯತೆಗಳು ಮತ್ತು ಕ್ಷೇತ್ರದಲ್ಲಿನ ಯಾವುದೇ ಅಧಿಕೃತ ಸರಕಾರಿ ಸಭೆ ಮತ್ತು ಸಮಾರಂಭಗಳನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಉಪಸ್ಥಿತಿಯಲ್ಲಿ ಜರುಗಿಸುವುದು ಸಂವಿಧಾನಬದ್ಧ ಅಧಿಕಾರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮೂಡಬಿದರೆ – ಮುಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಆರ್‌ ಪಿಎಲ್ 4ನೇ* ಹಂತದ ನಿರ್ವಸಿತ ಫಲಾನುಭವಿಗಳಿಗೆ ಒದಗಿಸಿಕೊಡುವ ಪರಿಹಾರ/ಸೌಲಭ್ಯಗಳು ಮತ್ತಿತರ ಸಮಸ್ಯೆಗಳ ಕುರಿತ ಸಭೆಯನ್ನು ಏರ್ಪಡಿಸಿದ್ದು, ಶಾಸಕರಾದ ನನ್ನ ಗಮನಕ್ಕೂ ತಾರದೆ ಎರಡು ಸಲ ತಮ್ಮದೇ ನೇತೃತ್ವದಲ್ಲಿ ಸಭೆ ನಡೆಸಿಕೊಂಡಿದ್ದಾರೆ. ಎಂದು ಆರೋಪಿಸಿದ್ದಾರೆ

ಅವರು ಮಾತನಾಡಿ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ತುಳು ಪಿಲಿಕುಳೋತ್ಸವ, ಹಾಗೂ ಜಿಲ್ಲೆಯ ಅತ್ಯಂತ ಪ್ರಸಿದ್ಧಿಪಡೆದ ಜನಪದ ಕ್ರೀಡೆಯಾಗಿರುವ ಕಂಬಳ ಉತ್ಸವವನ್ನು ಜರುಗಿಸುವ ಕುರಿತು ಒಂದು ವಾರದ ಹಿಂದೆ ಪೂರ್ವಬಾವಿ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿಯೇ ಜಿಲ್ಲಾಧಿಕಾರಿಗಳು ನಡೆಸಿಕೊಟ್ಟಿದ್ದಾರೆ

ಸೆಪ್ಟೆಂಬರ್-4ನೇ ತಾರೀಖಿನಂದು ಭೂಮಿಪೂಜೆಯನ್ನು ಕೂಡ ತಮ್ಮದೇ ಅಧ್ಯಕ್ಷತೆಯಲ್ಲಿ ನಡೆಸಿಕೊಂಡಿದ್ದಾರೆ.

ಈ ಕಾರ್ಯಕ್ರಮಗಳಿಗೆ ಸ್ಥಳೀಯಶಾಸಕರಾದ ತಮ್ಮನ್ನು ಆಹ್ವಾನಿಸದೆ ನಿಯಮಬಾಹಿರವಾಗಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಮೋರ್ಟ್ ಪ್ರದೇಶವ್ಯಾಪ್ತಿಯಲ್ಲಿ ಮಳೆಯ ಅತಿವೃಷ್ಟಿಯಿಂದಾಗಿ ಸಾರ್ವಜನಿಕರಿಗೆ, ಸ್ಥಳೀಯರಿಗೆ ತೀರಾ ಅನಾಹುತದ ಸಮಸ್ಯೆಗಳುಂಟಾಯಿತು. ಶಾಸಕನಾದ ನಾನು ಸ್ವತ: ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತಪರಿಹಾರ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದೇನೆ. ಜಿಲ್ಲಾಧಿಕಾರಿಯವರು ಸ್ಥಳೀಯ ಪಟ್ಟಣಪಂಚಾಯತ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳನ್ನು ಕರೆದು ಸಭೆ ಮಾಡಿ ನನ್ನನ್ನು ಆಹ್ವಾನಿಸದೇ ಅವಮಾನಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಗಂಭೀರ ಆರೋಪ ಮಾಡಿದ್ದಾರೆ

ನನ್ನ ಕ್ಷೇತ್ರವ್ಯಾಪ್ತಿಯ ಸಸಿಹಿತ್ಲು ಸಮುದ್ರತೀರ ಪ್ರದೇಶದಲ್ಲಿ ಇಂಟರ್ ನ್ಯಾಶನಲ್ ಸರ್ಫಿಂಗ್ ಏರಿಯಾ ಅಭಿವೃದ್ಧಿ ಕುರಿತಾದ ಸಭೆ, ಸರ್ಫಿಂಗ್ ಕ್ರೀಡಾಚಟುವಟಿಕೆ ಕಾರ್ಯಕ್ರಮಗಳನ್ನು ಜರುಗಿಸಿದ್ದರೂ ಜಿಲ್ಲಾಧಿಕಾರಿಗಳು ತಾವೇ ಅಧ್ಯಕ್ಷತೆ ವಹಿಸಿ ಸ್ಥಳೀಯ ಶಾಸಕನಾದ ನನ್ನನ್ನು ನಿರ್ಲಕ್ಷಿದ್ದಲ್ಲದೆ ಸಮಾರಂಭದ ಕುರಿತು ಯಾವುದೇ ಮಾಹಿತಿಗಳನ್ನು ನನಗೆ ನೀಡಿರುವುದಿಲ್ಲ. ಎಂದು ಆರೋಪಿಸಿರುವ ಅವರು

ದ.ಕ. ಜಿಲ್ಲಾಧಿಕಾರಿಯವರು ಪಕ್ಷರಾಜಕಾರಣವನ್ನು ಪೋಷಿಸುವ ಪ್ರೋತ್ಸಾಹಿಸುವ ಮೂಲಕ ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ತಾರದೆ ಕಾಂಗ್ರೆಸ್ ಮುಖಂಡರುಗಳನ್ನು ಮಾತ್ರ ಆಹ್ವಾನಿಸಿ ಸಭೆ ನಡೆಸಿರುತ್ತಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು

ಹೀಗೆ ಹಲವಾರು ಉದಾಹರಣೆಗಳು ಇದ್ದು ಸ್ಥಳೀಯ ಶಾಸಕನಾದ ನನ್ನ ಹಕ್ಕುಬಾಧ್ಯತೆಗಳನ್ನು ಜಿಲ್ಲಾಧಿಕಾರಿಯವರು ಉಲ್ಲಂಘಿಸುವ ಮೂಲಕ ಅಪಮಾನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರಿಗೆ ದೂರು ನೀಡಲು ಚಿಂತನೆ ನಡೆಸಲಾಗುವುದು ಎಂದರು

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ದಕ್ಷಿಣ ಕ್ಷೇತ್ರದ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

06/09/2024 08:16 pm

Cinque Terre

1.32 K

Cinque Terre

0

ಸಂಬಂಧಿತ ಸುದ್ದಿ