ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಏರ್‌ಪೋರ್ಟ್: ರನ್‌ವೇ ತಪಾಸಣೆಗೆ ಕಾರ್ಯಪಡೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಪರೀಕ್ಷಾ ಕಾರ್ಯ ಪಡೆಯನ್ನು ರಚಿಸಲಾಗಿದ್ದು, ಏರ್ ಪೋರ್ಟ್ ಸರ್ಫೇಸ್ ಪ್ರಿಕ್ಷನ್ ಟೆಸ್ಟರ್ (ಎಎಸ್‌ಎಫ್‌ಟಿ) ಯಂತ್ರಗಳ ಮೂಲಕ ಈ ತಪಾಸಣೆ ನಡೆಯಲಿದೆ.

ಪ್ರಭಾಕರನ್ ಸುಂದರಂ, ಶೆಫಾಲಿ ಮಲ್ದಾ‌ರ್ ಮತ್ತು ಪ್ರಸನ್ನ ರಾಜೇಂದ್ರನ್ ಅವರನ್ನೂಳ ಗೊಂಡ ಎಲೆಕ್ನಿಕಲ್, ಸಿವಿಲ್ ಮತ್ತು ಮೆಕ್ಯಾ ನಿಕಲ್ ಎಂಜಿನಿಯರ್‌ಗಳು ತಂಡದಲ್ಲಿದ್ದಾರೆ. ಫಿನ್ ಲ್ಯಾಂಡ್‌ನಿಂದ ಆಮದು ಮಾಡಲಾದ ಎಎಸ್ ಎಫ್‌ಟಿ ಉಪಕರಣ ಗಳೊಂದಿಗೆ ರನ್‌ವೇಯಲ್ಲಿ ತಪಾಸಣೆ ನಡೆಸಲು ಮತ್ತು ಮಾಪನಾಂಕ ನೀಡಲು ಪ್ರಮಾಣೀಕರಿಸಲಾಗಿದೆ.

ರನ್‌ವೇನಲ್ಲಿ ವಿಮಾನಗಳು ಸಾಗುವಾಗ ಚಕ್ರಗಳಲ್ಲಿ ರುವ ರಬ್ಬರ್‌ನ ಅವಶೇಷವನ್ನು ಉಳಿಸುವುದುರಿಂದ ರನ್‌ವೇ ಜಾರಲು ಕಾರಣವಾಗುತ್ತದೆ. ಇದು ಪ್ರಯಾ

ಣಿಕರ ಸುರಕ್ಷೆಗೆ ಸವಾಲಾಗಲಿದೆ. ಆದ್ದರಿಂದ ರನ್ ವೇ ಮೇಲ್ಪೆಯಲ್ಲಿ ಜಾರುವಿಕೆ ಮತ್ತು ಘರ್ಷಣೆಯ ಪ್ರಮಾಣವನ್ನು ಅಳೆಯಲು ಎಎಸ್‌ಎಫ್‌ಟಿ ವಾಹನ ಬಳಸಲಾಗುತ್ತದೆ.

ಯುವ ಮತ್ತು ಉತ್ಸಾಹಿ ಸಿವಿಲ್ ಎಂಜಿನಿಯರ ಶೆಫಾಲಿ ಅವರು ವಾಯುಯಾನ ಕ್ಷೇತ್ರ ಪ್ರಸ್ತುತ ಪಡಿಸುವ ಸವಾಲುಗಳನ್ನು ಎದುರಿಸಲಿದ್ದಾರೆ. ಅನುಭವಿ ಮೆಕಾನಿಕಲ್ ಎಂಜಿನಿಯರ್ ಪ್ರಸನ್ನ ಮತ್ತು ಇನ್ನೋರ್ವ ಅನುಭವಿ ಪ್ರಭಾಕರನ್ ಅವರು ಎಲೆಕ್ಟಿಕಲ್ ಎಂಜಿನಿಯರಿಂಗ್ ಕೌಶಲದಿಂದ ಎಎಸ್ ಎಫ್‌ಟಿಯನ್ನು ನಿರ್ವಹಿಸಲಿದ್ದಾರೆ. ಈ ಅನುಭವಿ ಮತ್ತು ಯುವ ತಂಡವು ಫಿನ್‌ಲ್ಯಾಂಡ್‌ನ ಒಇಎಂ ಮೊವೆಂಟರ್ ಎಎಸ್‌ಎಫ್‌ಟಿ ಮೂಲಕ ರನ್‌ವೇ ನಿರ್ವಹಣೆ ಮತ್ತು ಮಾಪನಾಂಕ ಮಾಡಲಿದ್ದಾರೆ. ವಿಮಾನ ನಿಲ್ದಾಣವು ಪ್ರತಿ 45 ದಿನಗಳಿಗೊಮ್ಮೆ ಈ ಪರೀಕ್ಷೆ ನಡೆಸುತ್ತದೆ ಎಂದು ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

06/09/2024 07:58 pm

Cinque Terre

1 K

Cinque Terre

0

ಸಂಬಂಧಿತ ಸುದ್ದಿ