ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎ.ಜೆ.ಆಸ್ಪತ್ರೆಯ ‘‘ದಿರಾ ಅಸ್ಥೆಟಿಕ್ಸ್’’ ಶುಭಾರಂಭ

ಮಂಗಳೂರು: ಎ.ಜೆ.ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದ ‘‘ದಿರಾ ಅಸ್ಥೆಟಿಕ್ಸ್’’ ಸಂಸ್ಥೆಯು ಮಂಗಳೂರಿನ ಕದ್ರಿ- ಕರಂಗಲ್ಪಾಡಿ ರಸ್ತೆಯ ಪಿಂಟೋ ಆರ್ಕೇಡ್‌ನ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಗೆ ಎ.ಜೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎ.ಜೆ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಇತರರು ಚಾಲನೆ ನೀಡಿದರು.

ಈ ವೇಳೆ ಎ.ಜೆ.ಸಮೂಹ ಸಂಸ್ಥೆಗಳ ಮುಖ್ಯಸ್ಥ ಎ.ಜೆ ಶೆಟ್ಟಿ ಮಾತನಾಡಿ, ಎ.ಜೆ.ಆಸ್ಪತ್ರೆ ಸಂಶೋಧನಾ ಕ್ಷೇತ್ರವು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಇದೀಗ ಸೌಂದಯಕ್ಕೆ ವಿಶೇಷ ಒತ್ತು ನೀಡುವ ಸಲುವಾಗಿ ಹೊಸ ಹೆಜ್ಜೆಯನ್ನಿಡಲಾಗಿದೆ. ‘‘ದಿರಾ ಅಸ್ಥೆಟಿಕ್ಸ್’’ನಲ್ಲಿ ಕಾಸ್ಮೆಟಿಕ್ ಡರ್ಮಟಲಾಜಿಸ್ಟ್ ಡಾ.ರಮ್ಯಾ ಶ್ರುತಿ ಅವರ ನೇತೃತ್ವದಲ್ಲಿ ಚಿಕಿತ್ಸೆ ಹಾಗೂ ಡಾ. ದಿನೇಶ್ ಕದಮ್ ನೇತೃತ್ವದ ಪ್ಲಾಸ್ಟಿಕ್ ಸರ್ಜನ್‌ಗಳ ತಂಡವು ಅತ್ಯಾಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ಒದಗಿಸಲಿದೆ. ಸುಧಾರಿತ ಚರ್ಮದ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಯಿಲ್ಲದ ಮುಖದ ವರ್ಧನೆಗಳು, ದೇಹದ ಬಾಹ್ಯರೇಖೆ, ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದು, ಕೂದಲು ಪುರ್ನಸ್ಥಾಪನೆ ಚಿಕಿತ್ಸೆ, ಕಸ್ಟಮೈಸ್ ಮಾಡಿದ ತ್ವಚೆ ಪರಿಹಾರ ಸೇರಿದಂತೆ ಹಲವು ಚಿಕಿತ್ಸೆ ನೀಡಲಿದೆ. ವರ್ಧಿತ ಸೌಂದರ್ಯ, ದಿರಾ ಸೌಂದರ್ಯಶಾಸ್ತ್ರವು ಶ್ರೇಷ್ಠತೆ, ನಾವೀನ್ಯತೆ ಮತ್ತು ವೈಯಕ್ತಿಕಗೊಳಿಸಿದ ಕಾಳಜಿಯ ಭರವಸೆಯನ್ನು ನೀಡುತ್ತದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಎ.ಜೆ.ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ‌. ಪ್ರಶಾಂತ್ ಮಾರ್ಲ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಡೈರೆಕ್ಟರ್ ಮೆಡಿಕಲ್ ಅಡ್ಮಿನಿಸ್ಟ್ರೇಟರ್ ಅಮಿತ ಬಿ. ಮಾರ್ಲ, ಕಾಸ್ಮೆಟಿಕ್ ಡರ್ಮಟಲಜಿಸ್ಟ್ ಡಾ.ರಮ್ಯಾ ಶ್ರುತಿ, ಎ.ಜೆ. ಸಮೂಹ ಸಂಸ್ಥೆಗಳ ಡೈರೆಕ್ಟರ್ ಆಶ್ರಿತ ಶೆಟ್ಟಿ, ಎ.ಜೆ.ಸಮೂಹ ಸಂಸ್ಥೆಗಳ ಡೈರೆಕ್ಟರ್ ಶಾರದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Edited By : Ashok M
PublicNext

PublicNext

06/09/2024 02:58 pm

Cinque Terre

36.47 K

Cinque Terre

0

ಸಂಬಂಧಿತ ಸುದ್ದಿ