ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮಾರುಕಟ್ಟೆ ಮತ್ತು ರಸ್ತೆ ಬದಿ ಹೂವಿನ ವ್ಯಾಪಾರಿಗಳ ನಡುವೆ ಜಟಾಪಟಿ

ಕಾಪು: ಹೂವಿನ ಮಾರುಕಟ್ಟೆ ವ್ಯಾಪಾರಿಗಳು ಮತ್ತು ರಸ್ತೆ ಬದಿ ಹೂವು ಮಾರಾಟ ಮಾಡುವವರ ನಡುವೆ ಉಡುಪಿ ಜಿಲ್ಲೆಯ ಕಾಪು ಪೇಟೆಯಲ್ಲಿ ಜಟಾಪಟಿ ನಡೆದಿದೆ.

ಚೌತಿಯ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಸನದ ದಾವಣಗೆರೆ ವ್ಯಾಪಾರಿಗಳು ಹೂವುಗಳನ್ನು ತಂದು ಉಡುಪಿ ನಗರ, ಕಾಪು -ಕುಂದಾಪುರದ ಭಾಗದ ಪ್ರಮುಖ ಜಂಕ್ಷನ್ ಗಳಲ್ಲಿ ಮಾರುತ್ತಾರೆ. ಕಾಪು ಪೇಟೆಯಲ್ಲಿ ಹೂವಿನ ವ್ಯಾಪಾರ ಶುರುಮಾಡಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಪುರಸಭೆಗೆ ನಾವು ಟ್ಯಾಕ್ಸ್ ಕಟ್ಟುತ್ತೇವೆ, ವರ್ಷದಲ್ಲಿ ನಾಲ್ಕೈದು ಬಾರಿ ಹಬ್ಬ ಹರಿದಿನ ಬರುವ ಸಂದರ್ಭದಲ್ಲಿ ನೀವು ವ್ಯಾಪಾರಕ್ಕಿಳಿದರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದ್ದಾರೆ.

ನಾವು ಹೂವಿನ ಬೆಳೆಗಾರರು. ನಾವು ವರ್ಷಕ್ಕೆ ಒಂದೋ ಎರಡು ಬಾರಿ ಮಾತ್ರ ವ್ಯಾಪಾರ ಮಾಡುತ್ತೇವೆ. ಬೆಳೆದವರು ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದಿದ್ದಾರೆ. ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ ಗಣೇಶ ಚತುರ್ಥಿ ದೀಪಾವಳಿ ಸಂದರ್ಭ ಹೂವಿನ ಬೆಳೆಗಾರರೇ ಟೆಂಪೋಗಳಲ್ಲಿ ಹೂವನ್ನು ತಂದು ಉಡುಪಿಯ ಹಲವೆಡೆ ರಸ್ತೆ ಬದಿ ಮಾರಾಟ ಮಾಡುತ್ತಿದ್ದಾರೆ. ನಾವು ಬೆಳೆದ ಹೂವನ್ನು ನಾವು ಮಾರಾಟ ಮಾಡಬಾರದಾ? ವ್ಯಾಪಾರ ಮಾಡಬಾರದು ಎಂಬ ರೂಲ್ಸ್ ಏನಾದ್ರೂ ಇದೆಯಾ? ಎಪಿಎಂಸಿ ಹಾಗಂತ ಲೆಟರ್ ಕೊಡ್ಲಿ, ಇವತ್ತೇ ಲಾಸ್ಟ್ ಹೂವು ಮಾರಲ್ಲ. ದಲ್ಲಾಳಿಗಳಿಗೆ ಕೊಟ್ಟುಬಿಡ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By : Suman K
Kshetra Samachara

Kshetra Samachara

06/09/2024 12:08 pm

Cinque Terre

7.17 K

Cinque Terre

1

ಸಂಬಂಧಿತ ಸುದ್ದಿ