ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಎ.ಜೆ.ಆಸ್ಪತ್ರೆಯ ‘‘ದಿರಾ ಅಸ್ಥೆಟಿಕ್ಸ್’’ ಇಂದು ಲೋಕಾರ್ಪಣೆ

ಮಂಗಳೂರು: ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲು ಸೌಂದರ್ಯದ ಔಷಧಗಳನ್ನು ಒದಗಿಸುವ ನಿಟ್ಟಿನಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ‘‘ದಿರಾ ಅಸ್ಥೆಟಿಕ್ಸ್’’ ಎಂಬ ಸಂಸ್ಥೆ ಸೆ.5 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಎ.ಜೆ. ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಪ್ರಶಾಂತ್ ಮಾರ್ಲ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಮಂಗಳೂರಿನಲ್ಲಿ ಎ.ಜೆ ಆಸ್ಪತ್ರೆ ಸಂಶೋಧನಾ ಕ್ಷೇತ್ರವು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದ್ದು, ಇದೀಗ ಸೌಂದಯಕ್ಕೆ ವಿಶೇಷ ಒತ್ತು ನೀಡುವ ಸಲುವಾಗಿ ಹೊಸ ಹೆಜ್ಜೆಯನ್ನಿಡಲಾಗಿದೆ. ಈ ಹಿನ್ನೆಲೆಯಲ್ಲಿ ‘‘ದಿರಾ ಅಸ್ಥೆಟಿಕ್ಸ್’’ ಸಂಸ್ಥೆಯನ್ನು ಕದ್ರಿ- ಕರಂಗಲ್ಪಾಡಿ ರಸ್ತೆಯ ಪಿಂಟೋ ಆರ್ಕೇಡ್‌ನ 2ನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

‘‘ದಿರಾ ಅಸ್ಥೆಟಿಕ್ಸ್’’ ನಲ್ಲಿ ಕಾಸ್ಮೆಟಿಕ್ ಡರ್ಮಲಾಜಲಿಸ್ಟ್ ಡಾ. ರಮ್ಯಾ ಶ್ರುತಿಯವರ ನೇತೃತ್ವದಲ್ಲಿ ಚಿಕಿತ್ಸೆ ಹಾಗೂ ಡಾ. ದಿನೇಶ್ ಕದಮ್ ನೇತೃತ್ವದ ಪ್ಲಾಸ್ಟಿಕ್ ಸರ್ಜನ್‌ಗಳ ತಂಡವು ಅತ್ಯಾಧುನಿಕ ಉಪಕರಣಗಳ ಮೂಲಕ ಚಿಕಿತ್ಸೆ ಒದಗಿಸಲಿದೆ.

ಸುಧಾರಿತ ಚರ್ಮದ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಯಿಲ್ಲದ ಮುಖದ ವರ್ಧನೆಗಳು, ದೇಹದ ಬಾಹ್ಯರೇಖೆ, ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದು, ಕೂದಲು ಪುರ್ನಸ್ಥಾಪನೆ ಚಿಕಿತ್ಸೆ, ಕಸ್ಟಮೈಸ್ ಮಾಡಿದ ತ್ವಚೆ ಪರಿಹಾರ ಸೇರಿದಂತೆ ಹಲವು ಚಿಕಿತ್ಸೆ ನೀಡಲಿದೆ. ವರ್ಧಿತ ಸೌಂದರ್ಯ, ದಿರಾ ಸೌಂದರ್ಯಶಾಸ್ತ್ರವು ಶ್ರೇಷ್ಠತೆ, ನಾವೀನ್ಯತೆ ಮತ್ತು ವೈಯಕ್ತಿಕಗೊಳಿಸಿದ ಕಾಳಜಿಯ ಭರವಸೆಯನ್ನು ನೀಡುತ್ತದೆ ಎಂದವರು ಹೇಳಿದರು.

ಈ ಸಂದರ್ಭ ಕಾಸ್ಮೆಟಿಕ್ ಡರ್ಮಲಾಜಲಿಸ್ಟ್ ಡಾ. ರಮ್ಯಾ ಶ್ರುತಿ, ಪ್ರೀತಮ್ ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

05/09/2024 11:38 am

Cinque Terre

31.74 K

Cinque Terre

0

ಸಂಬಂಧಿತ ಸುದ್ದಿ