ಮಂಗಳೂರು: ತಾಯಿಗೆ ಬರ್ತ್ ಡೇಗೆ ವಿಶ್ ಮಾಡಲು ಹಾಸ್ಟೆಲ್ ವಾರ್ಡನ್ ಫೋನ್ ಕೊಡಲಿಲ್ಲವೆಂದು ತಲಪಾಡಿ ಕಿನ್ಯಾ ಶಾರದಾ ನಿಕೇತನಾ ಶಾಲೆಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ಕರೆ ಮಾಡಲು ಫೋನ್ ಕೊಡಲಿಲ್ಲವೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ವಿದ್ಯಾರ್ಥಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಆದ್ದರಿಂದ ಆ ವಿದ್ಯಾ ಸಂಸ್ಥೆಯಲ್ಲಿ ಯಾವ ರೀತಿ ನಿಯಮಗಳಿವೆ ಅಥವಾ ಬೇರೆ ಉದ್ದೇಶಕ್ಕೆ ಫೋನ್ ಕೊಡಲಿಲ್ಲವೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಏನಿದು ಪ್ರಕರಣ?: ತಾಯಿಯ ಹುಟ್ಟುಹಬ್ಬದಂದು ಶುಭಾಶಯ ತಿಳಿಸಲು ಹಾಸ್ಟೆಲ್ ವಾರ್ಡನ್ ಮೊಬೈಲ್ ನೀಡಲಿಲ್ಲವೆಂದು ಶಾರದಾ ವಿದ್ಯಾನಿಕೇತನದ 9ನೇ ತರಗತಿ ವಿದ್ಯಾರ್ಥಿ ಪೂರ್ವಜ್ ಆರ್. (14) ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರವಿವಾರ ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ ಈ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಹಾಸ್ಟೆಲ್ ನಿಯಮದ ಪ್ರಕಾರ ಮೊಬೈಲ್ ಬಳಸಲು ಪರವಾನಿಗೆಯಿಲ್ಲ. ಆದ್ದರಿಂದ ತಾಯಿಯ ಬರ್ತ್ ಡೇ ವಿಶ್ ಮಾಡಲು ಮೊಬೈಲ್ ಕೊಡಲಿಲ್ಲವೆಂದು ಈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.
PublicNext
13/06/2022 05:21 pm