ಹಾಸನ : ಅನಾರೋಗ್ಯ ಪೀಡಿತ ಮಹಿಳೆಗೆ ಪೂಜೆ ಮಾಡಿ ಗುಣಪಡಿಸೋದಾಗಿ ಹಲ್ಲೆ ಮಾಡಿ ಮಹಿಳೆಯನ್ನು ಬಲಿ ಪಡೆದಿರುವ ಅಮಾನವೀಯ ಕೃತ್ಯ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬೆಕ್ಕ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಗೌಡಗೆರೆ ಗ್ರಾಮದ ಪಾರ್ವತಿ(47) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋದರೂ ಗುಣಮುಖವಾಗದ ಹಿನ್ನೆಲೆಯಲ್ಲಿ ಡಿಸೆಂಬರ್ 7 ರಂದು ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಬೆಕ್ಕ ಗ್ರಾಮದ ಪಿರಿಯಾಪಟ್ಟಣದಮ್ಮ ದೇವರ ಪೂಜಾರಿ ಮಧು ಎಂಬಾತ ಬೆತ್ತದಿಂದ ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಇನ್ನು ಪೂಜಾರಿ ಕೊಟ್ಟ ಬೆತ್ತದ ಏಟಿಗೆ ಅಸ್ವಸ್ಥಗೊಂಡಿದ್ದ ಮಹಿಳೆಗೆ ನಿಂಬೆ ರಸ ಕುಡಿಸಿ ಖಾಯಿಲೆ ಗುಣವಾಗಿದೆ ಎಂದು ಹೇಳಲಾಗಿದ್ದು ಇನ್ನೂ ಪೂಜಾರಪ್ಪ ಬಾರಿಸಿದ ಏಟಿಗೆ ತೀವ್ರ ಅಸ್ವಸ್ಥಗೊಂಡ ಮಹಿಳೆ ಚಿಕಿತ್ಸೆ ಫಲಿಸದೆ ಡಿಸೆಂಬರ್ 8 ರಂದು ಹಾಸನದ ಹಿಮ್ಸ್ ನಲ್ಲಿ ಸಾವನ್ನಪ್ಪಿದ್ದಾಳೆ.
ಈ ಕುರಿತು ಡಿಸೆಂಬರ್ 9 ರಂದು ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ಮಧು ತಲೆಮರೆಸಿಕೊಂಡಿದ್ದಾನೆ.
PublicNext
11/12/2021 10:55 am