ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಿಯಾಟಕ್ಕೆ ಬಲಿಯಾದ ಕನ್ನಡದ 3 ಮುತ್ತುಗಳು ಜನಿಸಿದ್ದು ಒಂದೇ ತಾರೀಖಿನಂದು ಆದ್ರೆ…

ಕನ್ನಡ ಚಿತ್ರರಂಗದಲ್ಲಿ ಇನ್ನು ಬಾಳಿ ಬೆಳಗಬೇಕಾದ ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ ಅವರು ಹುಟ್ಟಿದ್ದು 17 ತಾರೀಖಿನಂದು. ಇಂದು ನಾವು ಈ ಮೂರು ಮುತ್ತುಗಳನ್ನು ಕಳೆದುಕೊಂಡಿದ್ದೇವೆ.

ಸದ್ಯಕನ್ನಡ ಚಿತ್ರರಂಗಕ್ಕೆ ಕತ್ತಲು ಆವರಿಸಿದೆ. ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅಪ್ಪು ರೀತಿಯೇ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಅವರನ್ನು ಕೂಡ ಸ್ಯಾಂಡಲ್ ವುಡ್ ಕಳೆದುಕೊಂಡಿದೆ. ಈ ಮೂವರ ಜನ್ಮದಿನಾಂಕದಲ್ಲಿ ಒಂದು ಸಾಮ್ಯತೆ ಇದೆ.

ಪುನೀತ್ ರಾಜ್ಕುಮಾರ್ ಜನಿಸಿದ್ದು ಮಾರ್ಚ್ 17ರಂದು. ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್ 17ರಂದು. ಸಂಚಾರಿ ವಿಜಯ್ ಅವರ ಜನ್ಮ ದಿನಾಂಕ ಜುಲೈ 17. ಇವರೆಲ್ಲರಿಗೂ ಈ ಸಂಖ್ಯೆಯೇ ಕಂಟಕವಾಯ್ತೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

31/10/2021 10:21 am

Cinque Terre

65.21 K

Cinque Terre

3