ಯಾದಗಿರಿ: ಅಲಂಕಾರಿಕ ಉಡುಗೆ ತೊಟ್ಟು ಡೊಳ್ಳು ಬಾರಿಸ್ತಿರೋದು.. ಮತ್ತೊಂದೆಡೆ ಬೃಹತ್ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಸಾಗಿ ಬರ್ತಿರೋದು ಈ ದೃಶ್ಯ ಕಂಡು ಬಂದಿದ್ದು, ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ.
ಹೌದು. ಇಂದು ತಾಲ್ಲೂಕಿನ ಶೆಳ್ಳಗಿ ಕ್ರಾಸ್ ಬಳಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸಾವಿರಾರು ಜನರು ಸೇರಿಕೊಂಡು ವೆಂಕಟಪ್ಪ ನಾಯಕ ಚೌಕ್ ನಿಂದ ಸುರಪುರ ಗಾಂಧಿ ಚೌಕ್ ವರಗೆ ಅದ್ದೂರಿ ಮೆರವಣಿಗೆ ನಡೆಸಿದರು. ಇನ್ನು ಕೆಲ ಯುವಕರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. ಇದಲ್ಲದೇ ಡೊಳ್ಳು ಕುಣಿತ ನೋಡುಗರ ಕಣ್ಮನಸೆಳೆಯುತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ಮಲ್ಲು ದಂಡಿನ್, ನಿಂಗು ಐಕೂರ, ವಾಸು ಕವಡಿಮಟ್ಟಿ ಸೇರಿದಂತೆ ಅನೇಕ ಜನರು ಇದ್ದರು.
- ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
Kshetra Samachara
12/09/2022 04:36 pm