ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ದೇವರಗಡ್ಡಿಯಲ್ಲಿ ನಡೀತು ಅದ್ಧೂರಿ ಗದ್ದೆಮ್ಮದೇವಿ ರಥೋತ್ಸವ

ಯಾದಗಿರಿ: ಏಳಿರೋ... ಏಳಿರೋ.. ಜೈ..ಜೈ..ಗದ್ದೆಮ್ಮ ಅಂತಾ ವಿವಿಧ ಹೂವುಗಳಿಂದ ಅದ್ಭುತವಾಗಿ ಅಲಂಕರಿಸಿದ

ಗಡ್ಡಿ ಗದ್ದೆಮ್ಮದೇವಿಯ ರಥವನ್ನು ಭಕ್ತಿಪೂರ್ವಕವಾಗಿ ಸಾವಿರಾರು ಭಕ್ತರು ಎಳೆದರು.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರೋ ಗದ್ದೆಮ್ಮ ದೇವಿ ಜಾತ್ರೋತ್ಸವದ ನಿಮಿತ್ತ ಇಂದು ದೇವಿಯ ರಥೋತ್ಸವವು ಅದ್ಧೂರಿಯಾಗಿ ನಡೆಯಿತು.

ಇನ್ನು ಗದ್ದೆಮ್ಮದೇವಿ ಭಾನುವಾರದಂದು ಸುತ್ತಮುತ್ತಲಿನ ಏಳು ಊರುಗಳಿಗೆ ದರ್ಶನ ನೀಡಿ ಮರಳಿ ದೇವರಗಡ್ಡಿಗೆ ಆಗಮಿಸಿದ್ದು,ನಿನ್ನೆ ದೇವಿಯ ಅರ್ಚಕರು ಅಗ್ನಿ ಆಯುವ ಕಾರ್ಯಕ್ರಮ ಜರುಗಿದ್ದು, ಇಂದು ರಥೋತ್ಸವ ನಡೆಯಿತು.

ನಾಳೆ ಹುಚ್ಚಯ್ಯನ ರಥೋತ್ಸವ ನಡೆಯಲಿದ್ದು,ಗುರುವಾರ ದೇವಿಯುವ ಡೊಳ್ಳು ವಾದ್ಯದೊಂದಿಗೆ ದೇಗುಲ ಪ್ರವೇಶ ಮಾಡುತ್ತಾಳೆ.

ಇನ್ನು ಗಡ್ಡಿ ಗದ್ದೆಮ್ಮದೇವಿಯ ಜಾತ್ರೆಯಲ್ಲಿ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು,ಜಾತ್ರೆಗೆ ಬಂದಂತ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಜೊತೆಗೆ ಜೀಕ, ಜೋಕಾಲಿ ಆಡಿ ಆಗೇ ಭಜ್ಜಿ , ಜಿಲೇಬಿ ಸವಿದು ಮಸ್ತ್ ಎಂಜಾಯ್ ಮಾಡಿದರು.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Ashok M
PublicNext

PublicNext

15/01/2025 11:04 am

Cinque Terre

28.93 K

Cinque Terre

0