ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಕ್ ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ..!

ಯಾದಗಿರಿ : ರಾಜ್ಯದಲ್ಲೇ ಮರಳು ದಂಧೆಗೆ ಹೆಸರುವಾಸಿಯಾಗಿರುವ ಸುರಪುರದಲ್ಲಿ ಮರಳು ದಂಧೆಕೋರರೊಬ್ಬರ ಹುಟ್ಟು ಹಬ್ಬಕ್ಕೆ ತಯಾರಿಸಿದ ವಿಶೇಷ ಕೇಕ್ ಭಾರೀ ವೈರಲ್ ಆಗ್ತಿದೆ.

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮರಳು ದಂಧೆ ನಡೆಸುವ ಪ್ರಭಾವಿಯೊಬ್ಬನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಮರಳಿನ ಅಡ್ಡೆ, ಎರಡು ಜೆಸಿಬಿ ಮತ್ತು ಲಾರಿಗಳನ್ನಿಟ್ಟು ಕೇಕ್ ಸಿದ್ದಪಡಿಸಿದ್ದಾರೆ. ಪ್ರಭಾವಿ ನಡೆಸುವ ಅಕ್ರಮದ ನೈಜ ಚಿತ್ರಣವನ್ನೇ ಕೇಕ್ ಮೇಲೆ ಬಿಡಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ.

ಅಷ್ಟೇ ಅಲ್ಲದೇ ಜೆಸಿಬಿ ಮೂಲಕ ಲಾರಿಯಲ್ಲಿ ಮರಳು ತುಂಬ್ತಿರುವ ದೃಶ್ಯ ಹೀಗೂ ಅಕ್ರಮ ದಂಧೆ ನಡೆಸಬಹುದಾ..? ಅನ್ನುವ ಪ್ರಶ್ನೆ ಹುಟ್ಟು ಹಾಕ್ತಿದೆ. ಇಷ್ಟೇಲ್ಲಾ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ರೂ ಸಹ ಪೊಲೀಸರು ಕಣ್ಮುಚ್ಚಿ ಕುಳಿತಿರೋದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

Edited By : Suman K
Kshetra Samachara

Kshetra Samachara

21/10/2024 03:23 pm

Cinque Terre

4.66 K

Cinque Terre

0