ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಸಿಡಿಲಿನ ಹೊಡೆತಕ್ಕೆ ಸುರಪುರ ತಾಲ್ಲೂಕಿನಲ್ಲಿ ಇಬ್ಬರು ಸಾವು

ಯಾದಗಿರಿ: ಸಿಡಿಲು ಬಡೆದು ಮಹಿಳೆಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಂದಮ್ಮ ಗಂಡ ನಿಂಗಪ್ಪ (35) ಮೃತಪಟ್ಟ ಮಹಿಳೆ, ತಮ್ಮ ಭತ್ತದ ಜಮೀನಿಗೆ ಕಳೆ ತೆಗೆದು ಬರುವಾಗ ಸಿಡಿಲು ಬಡಿದಿದೆ. ಶನಿವಾರ ಸಂಜೆ ವೇಳೆ ತಾಲ್ಲೂಕಿನಾದ್ಯಂತ ಮಳೆ-ಗಾಳಿಗೆ ಜೋರಾಗಿದ್ದು, ದುರದೃಷ್ಟವಶಾತ್ ಸಿಡಿಲಿನ ಬಡಿತಕ್ಕೆ ನಂದಮ್ಮ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಮೆನೆ ಮುಂದೆ ನಿಂತ ವೇಳೆ ಸಿಡಿಲು ಬಡಿದು ರಾಜು ಸಿಂಗ್ (38) ಎಂಬುವವರು ನಿನ್ನೆ ಮೃತಪಟ್ಟಿದ್ದು, ಇವರಿಗೆ ಸಂಬಂಧಿಸಿದ ಎರಡು ಮೇಕೆಗಳು ಕೂಡ ಮೃತಪಟ್ಟಿವೆ. ಇನ್ನು ಈ ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Manjunath H D
PublicNext

PublicNext

11/09/2022 09:08 am

Cinque Terre

34.25 K

Cinque Terre

0