ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಅಪಘಾತ ಸಂಭವಿಸಿ 2 ತಾಸು ಕಳೆದ್ರೂ ಬಾರದ ಆಂಬ್ಯುಲೆನ್ಸ್!- ಜೀವನ್ಮರಣ ಹೋರಾಟದಲ್ಲಿ ಗಾಯಾಳು

ಯಾದಗಿರಿ: ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಯಚೂರು ಟು ಯಾದಗಿರಿ ರಸ್ತೆಯಲ್ಲಿ ಕಾರೊಂದು ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ನರಳಾಡುವ ದೃಶ್ಯ ಮನಕಲಕುವಂತಿತ್ತು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸೈದಾಪುರ ಠಾಣೆಯ ಹೆದ್ದಾರಿ ಗಸ್ತು ಪೊಲೀಸರು ತಕ್ಷಣ ಸ್ಥಳೀಯ ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ರೂ ಆಂಬ್ಯುಲೆನ್ಸ್ 2 ತಾಸು ಕಳೆದ್ರೂ ಬಾರದೇ ಇದ್ದ ಕಾರಣ ನೋವಿನಿಂದ ಗಾಯಾಳು ಒದ್ದಾಡುತ್ತಿದ್ದರು.

ಯಾದಗಿರಿ ತಾಲೂಕಿನ ಆರ್ ಹೊಸಳ್ಳಿ ಗ್ರಾಮದ ದೇವಪ್ಪ ಮಂದಲರ (40 ) ಅಪಘಾತಕ್ಕೆ ಒಳಗಾದವರು. ಬಳಿಕ ಗಾಯಾಳುವನ್ನು ಬೇರೆ ವಾಹನದಲ್ಲಿ ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Somashekar
Kshetra Samachara

Kshetra Samachara

24/10/2024 05:28 pm

Cinque Terre

10.66 K

Cinque Terre

0