ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಭಂಡಾರದ ಧೂಳಿನಲ್ಲಿ ಮಿಂದೆದ್ದ ಜನತೆ- ಮಲ್ಲಯ್ಯ ದೇವರ ಜಾತ್ರಾ ಮಹೋತ್ಸವ

ಯಾದಗಿರಿ: ಎಲ್ಲೆಲ್ಲೂ ಭಂಡಾರದ ಧೂಳು... ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು... ಇದೆಲ್ಲಾ ಕಂಡು ಬಂದಿದ್ದು ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶಿಬಾರ ಮಲ್ಲಯ್ಯನ ಜಾತ್ರಾ ಮಹೋತ್ಸವದಲ್ಲಿ. ಮಲ್ಲಯ್ಯ ಬಂಡಿ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಈ ಜಾತ್ರೆ ವಿಜಯ ದಶಮಿಯ ಮರುದಿನ ನಡೆಯುತ್ತೆ. ಈ ಜಾತ್ರೆಗೆ ಯಾದಗಿರಿ ರಾಯಚೂರ,ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗವಹಿಸುತ್ತಾರೆ.

ಇನ್ನೂ ವಿಶೇಷವಾಗಿ ಮಲ್ಲಯ್ಯ ದೇವರನ್ನು ಬಂಡಿ ಇರಿಸಿ ಹಿಂದೆ ಮುಂದೆ ಎಳೆಯುವುದು ಜಾತ್ರೆಯ ವಿಶೇಷ. ಇನ್ನೂ ಇಲ್ಲಿ ನಡೆಯುವ ಜಾತ್ರೆಯಲ್ಲಿ ಕಬ್ಬಿಣದ ಸರಪಳಿಯನ್ನು ಹರಿದು ಜಾತ್ರೆಗೆ ಮಂಗಳ ಮಾಡಲಾಗುತ್ತದೆ. ಒಟ್ಟಿನಲ್ಲಿ ಕೆಂಭಾವಿ ಮಲ್ಲಯ್ಯನ ಬಂಡಿ ಜಾತ್ರೆ ಬಲು ವಿಶೇಷತೆಯಿಂದ ಅದ್ಧೂರಿಯಾಗಿ ಜರುಗಿತು.

Edited By : Nagesh Gaonkar
PublicNext

PublicNext

13/10/2024 05:16 pm

Cinque Terre

30.42 K

Cinque Terre

0