ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಶಹಾಪುರ ಹೊರವಲಯದಲ್ಲಿ ಬರ್ಬರ ಹತ್ಯೆ

ಯಾದಗಿರಿ: ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮದ ಬಳಿ ಸಂಜೆ ಸಮಯದಲ್ಲಿ ಓರ್ವನ ಬರ್ಬರ ಹತ್ಯೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿ ಜಾಪಾನಾಯಕ ತಾಂಡಾದ ತಿಪ್ಪಣ್ಣ (35) ಎಂದು ತಿಳಿದು ಬಂದಿದೆ. ಬೈಕ್ ಮೇಲೆ ಹೊರಟಿದ್ದ ತಿಪ್ಪಣ್ಣನನ್ನು ನಾಲ್ಕಾರು ಜನ ಸೇರಿ ಮಾರಾಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಹತ್ಯೆಯಾದ ಸುದ್ದಿ ತಿಳಿದು ಜನ ಭಯಭೀತರಾಗಿದ್ದಾರೆ. ಕೊಲೆಗೆ ಮುಖ್ಯ ಕಾರಣವೇನೆಂದು ಸಮರ್ಪಕವಾಗಿ ಕಾರಣ ತಿಳಿದುಬಂದಿಲ್ಲ . ಹಳೇ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರ ತನಿಖೆ ನಂತರವೇ ಸತ್ಯಾಂಶ ಬಯಲಾಗಲಿದೆ.

ಘಟನಾ ಸ್ಥಳಕ್ಕೆ ಪಿಐ ಎಸ್.ಎಂ.ಪಾಟೀಲ್ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್‌ಪಿ ಭೇಟಿ ನೀಡಿ ಪರಿಶೀಲನೆಗೆ ಸೂಚಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಲೆಯಾದ ತಿಪ್ಪಣ್ಣನ ಸಂಬಂಧಿಕರು ಇತರರು ಆಗಮಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಬಂದೋಬಸ್ತ್ ನಿಯೋಜಿಸಿದ್ದಾರೆ.

Edited By : Manjunath H D
PublicNext

PublicNext

02/11/2024 08:28 pm

Cinque Terre

49.59 K

Cinque Terre

0