ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಕೃಷ್ಣಾ ನದಿಗೆ ಏಕಾಏಕಿ ನೀರು ಬಿಡುಗಡೆ, ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿಗಳು

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ, ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ ಮತ್ತು ಕುರಿಗಳು ನದಿ ನೀರಿನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ಬನದೊಡ್ಡಿ ಗ್ರಾಮದ ಕುರಿಗಾಯಿಗಳು ಎಂದಿನಂತೆ ಸುಮಾರು 200 ಕುರಿಗಳನ್ನು ಮೇಯಿಸಲು ಹೋದಂತಹ ಸಂದರ್ಭದಲ್ಲಿ ಏಕಾಏಕಿ ಕೃಷ್ಣಾ ನೀರು ಸುತ್ತಲೂ ಆವರಿಸಿದೆ.

ಇದರಿಂದ ಗಾಬರಿಗೊಂಡ ಕುರಿಗಾಯಿಗಳು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳೀಯರು ತಿಂಥಣಿ ಗ್ರಾಮದ ನುರಿತ ಈಜು ಪಟುಗಳ ಸಹಾಯದಿಂದ, ತೆಪ್ಪಗಳ ಮೂಲಕ ಸುಮಾರು ಎರಡು ನೂರು ಕುರಿಗಳು ಮತ್ತು ಐದು ಜನ ಕುರಿಗಾಯಿಗಳನ್ನು ರಕ್ಷಣೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಇಷ್ಟೆಲ್ಲಾ ಅವಾಂತರ ನಡೆದರೂ ಸಹ ಸಂಬಂಧ ಪಟ್ಟ ತಾಲೂಕು ಮಟ್ಟದ ಅಧಿಕಾರಿಗಳು ಕುರಿಗಾಯಿಗಳನ್ನು ಸಂಪರ್ಕಿಸಿಲ್ಲವೆಂದು ಹೇಳಲಾಗುತ್ತಿದೆ.

Edited By : Shivu K
PublicNext

PublicNext

12/10/2024 08:34 pm

Cinque Terre

43.97 K

Cinque Terre

0