ಬೈಕ್ ನ ಒಂದೇ ಬದಿ ಕುಳಿತು ಒಂದೇ ಕೈಯಿಂದ ಬೈಕ್ ಚಲಾಯಿಸುವ ಮೂಲಕ ಯುವಕನೊಬ್ಬ ಹೀರೋ ರೆಂಜ್ ನಲ್ಲಿ ಸ್ಟಂಟ್ ಕೊಟ್ಟು ಸದ್ಯ ಪೇಚೆಗೆ ಸಿಲುಕಿದ್ದಾನೆ.ಛತ್ತೀಸ್ ಗಢದ ದುರ್ಗ್ ನ ಜನನಿಬಿಡ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆಯೇ ರಸ್ತೆಗಿಳಿದ ಈ ಭೂಪ ತಾನು ಬೈಕ್ ನಲ್ಲಿ ಅಡ್ಡ ಕುಳಿತು ಹೋಗುವುದನ್ನು ತನ್ನ ಸ್ನೇಹಿತನಿಂದ ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಇದೀಗ ಈ ಆಸಾಮಿ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟೇ ಅಲ್ಲದೆ ತಾನು ಮಾಡಿದ ತಪ್ಪಿಗೆ ಕಿವಿ ಹಿಡಿದುಕೊಂಡು ಕ್ಷಮೆ ಕೇಳಿದ್ದಾನೆ.
PublicNext
26/09/2022 05:58 pm