ಡೆಹ್ರಾಡೂನ್: ಹೌದು..ತನ್ನ ಪಾಡಿಗೆ ತಾನು ಅಂತ ಅರಿವೇ ಇಲ್ಲದೇ ಚಲಿಸುತ್ತಿದ್ದ, ಸೈಕಲ್ ಸವಾರನ ಮೇಲೆ ಅಡಗಿ ಕುಳಿತಿದ್ದ, ಚಿರತೆಯೊಂದು ಏಕಾಏಕಿ ಎರಗಿ ದಾಳಿ ಮಾಡಿದೆ. ಈ ವೇಳೆ ಯುವಕ ಸೈಕಲ್‌ನಿಂದ ಕೆಳಗೆ ಬಿದ್ದು, ಹೌಹಾರಿದ್ದಾನೆ. ಒಂದು ಕ್ಷಣ ಯುವಕನಿಗೆ ಜೀವ ಬಾಯಿಗೆ ಬಂದಂಗಾಗಿದೆ. ಅದೇನೆಂದು ತನಗೆ ಗೊತ್ತಾಗದೇ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ..ಸದ್ಯ ಈ ವಿಡಿಯೋ ಇಲ್ಲಿ ಕಾಣಬಹುದು.
ದಾಳಿ ಮಾಡಿದ ಚಿರತೆ ಕೂಡಲೇ ಹೆದ್ದಾರಿಯಲ್ಲಿ ಓಡಾಡ್ತಿದ್ದ ವಾಹನಗಳ ಶಬ್ದಕ್ಕೆ ಹಾಗೇ ಓಡಿಹೋಗಿದೆ. ಸದ್ಯ ಈ ಘಟನೆ ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದಿದ್ದು,ಅದೃಷ್ಟವಶಾತ್ ಯುವಕ ಚಿರತೆ ಬಾಯಿಂದ ಬಚಾವ್ ಆಗಿದ್ದಾನೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ನೋಡುಗರ ಮೈ ಜುಮ್ಮೆನಿಸುವಂತಿದೆ.
PublicNext
21/09/2022 04:50 pm