ಯಾರ್ ತಾನೇ ಮೊಬೈಲ್ಗೆ ಅಡಿಕ್ಟ್ ಆಗಿಲ್ಲ ಹೇಳಿ. ಯುವಕರಿಂದ ಹಿಡಿದು ವಯಸ್ಸಾದವರೆಲ್ಲರೂ ಮೂಬೈಲ್ಗೆ ಫುಲ್ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಅಂದಹಾಗೇ ಇತ್ತೀಚೆಗೆ ಪುಟ್ಟ ಪುಟ್ಟ ಮಕ್ಕಳು ಕೂಡ ಅದ್ಯಾಕೋ ಏನೂ ಮೊಬೈಲ್ ಗೀಳು ಹೆಚ್ಚಾಗಿ ಹೋಗಿದೆ.
ಅಕಸ್ಮಾತ್ ಮೊಬೈಲ್ ಇಲ್ಲಾ ಅಂದ್ರೆ ಪ್ರಂಪಚಾನೇ ಮುಳುಗಿ ಹೋಗಿರೋರ ಥರಾ ಆಡ್ತಾರೆ. ಯಾವಾಗಲೂ ಮೊಬೈಲ್ನಲ್ಲೇ ಮುಳುಗಿ ಹೋಗಿರ್ತಾರೆ. ಮೂರು ಹೊತ್ತು ಮೊಬೈಲ್ ಯೂಸ್ ಮಾಡ್ತಿದ್ದಕ್ಕೆ ಬಾಲಕನ ತಾಯಿಯೊಬ್ಬರು ಮಗನಿಂದ ಫೋನ್ ಕಸಿದುಕೊಂಡಿದ್ದಾರೆ. ಅಷ್ಟೇ..
ತಾಯಿ ಮೊಬೈಲ್ ಕಸಿದುಕೊಂಡ ಒಂದೇ ಒಂದು ಕಾರಣಕ್ಕೆ 11 ವರ್ಷದ ಈ ಬಾಲಕ ಅವಾಂತರವನ್ನೇ ಸೃಷ್ಟಿದ್ದಾನೆ.. ಮೊಬೈಲ್ ಕೊಡದಿದ್ದಕ್ಕೆ ಗರಂ ಆಗಿ ಮನೆ ವಸ್ತುಗಳೆಲ್ಲಾ ಜಖಂ ಮಾಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಬಾಲಕನ ಈ ಕೃತ್ಯಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
PublicNext
16/09/2022 09:11 pm