ಕೆಲವೊಂದು ಸಂದರ್ಭಗಳಲ್ಲಿ ನಾವು ಸಾವವಿ ದವಡೆಯಿಂದ ಪಾರಾದ ಪರಿ ನಿಜಕ್ಕೂ ಅಚ್ಚರಿಯಾಗಿರುತ್ತದೆ. ಹೌದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮಹಿಳೆ ಎರಡು ವಾಹನ ಮಧ್ಯೆ ಸಿಲುಕಿ ಜಸ್ಟ್ ಮಿಸ್ ಆಗಿದ್ದಾರೆ.ಈ ಅಪಘಾತದ ದೃಶ್ಯಗಳನ್ನು ನೋಡುತ್ತಿದ್ದರೆ ಇದೊಂದು ಪವಾಡವೇ ಎನಿಸುತ್ತಿದೆ.
ತೆಲಂಗಾಣದ ಎಡಿಜಿಪಿ ವಿ.ಸಿ ಸಜ್ಜನರ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಾವಿನಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರಾಗಿದ್ದಾರೆ. ಆದರೆ ನಾವು ಎಷ್ಟು ಸಮಯ ಅದೃಷ್ಟ ಕೈ ಹಿಡಿಯುವುದು ಎಂದು ನಂಬಲು ಸಾಧ್ಯ, ರಸ್ತೆಯಲ್ಲಿ ಜವಾಬ್ದಾರಿಯುತರಾಗಿ ವಾಹನ ಚಲಾಯಿಸಿ ಎಂದು ಬರೆದು ರಸ್ತೆ ಸುರಕ್ಷತೆಯ ಹ್ಯಾಶ್ಟ್ಯಾಗ್ ಜೊತೆ ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.
PublicNext
05/09/2022 09:31 pm