ಹೆಬ್ಬಾವೊಂದು ಆಹಾರವನ್ನರಸಿ ಕಾಡಿಂದ ನಾಡಿಗೆ ಬಂದಿತ್ತು. ಗ್ರಾಮದ ಮನೆ ಬಳಿ ಮಲಗಿದ್ದ ನಾಯಿಯನ್ನು ಹೆಬ್ವಾವೊಂದು ಸುತ್ತುವರಿದಿತ್ತು. ಇನ್ನೇನು ಹಾವು ನಾಯಿಯನ್ನು ನುಂಗಿ ಸ್ವಾಹ ಮಾಡಬೇಕೆನ್ನುವಷ್ಟರಲ್ಲಿ ಮನೆ ಮಾಲೀಕ ನಾಯಿ ಚೀರಾಟ ಕೇಳಿ ಸ್ಥಳಕ್ಕೆ ಬಂದು ನಾಯಿಯ ರಕ್ಷಣೆಗೆ ನಿಲ್ತಾನೆ..
ಮನೆ ಮಾಲೀಕ ಕಡ್ಡಿಯಲ್ಲಿ ಹೆಬ್ಬಾವಿನ ಸುತ್ತುವರಿದ ಭಾಗವನ್ನು ಬಿಡಸುವಷ್ಟರಲ್ಲಿ ಮತ್ತೊಂದು ಕಡೆಯಿಂದ ಸುತ್ತಿಕೊಳ್ಳುತ್ತಲೇ ಇತ್ತು. ಹೀಗೆ ಎರಡು ನಿಮಿಷ ಬಿಡಿಸುವ, ಬಿಗಿದುಕೊಳ್ಳುವ ಹೋರಾಟದಲ್ಲಿ ಮನೆ ಮಾಲೀಕ ಯಶಸ್ವಿಯಾಗ್ತಾನೆ.
ಮರದ ಕಡ್ಡಿ ತೆಗೆದುಕೊಂಡು ಹೆಬ್ಬಾವಿನ ತಲೆನ ಹುಷಾರಾಗಿ ಹಿಡಿದು, ಹೆಬ್ಬಾವಿನ ಸುತ್ತುವರಿದ ಭಾಗವನ್ನು ಜಾಣ್ಮೆಯಿಂದ ಬಿಡಿಸುತ್ತಾನೆ. ಕುಯ್ಯೊ ಮರ್ರೊ ಅಂತ ಚೀರಾಡ್ತಿದ್ದ ನಾಯಿ ಒಮ್ಮೆಲೆ ಮಾಲೀಕನ ಸತತ ಪ್ರಯತ್ನದಿಂದ ಅಂತೂ ಬಚಾವಾಗುತ್ತೆ.
ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಡಬೇಕೆನ್ನು ಮನೆ ಮಾಲೀಕನಿಗೆ ಹಾವು ಸೂಕ್ತವಾಗಿ ಸ್ಪಂದಿಸಲಿಲ್ಲ. ಹಾವು ರಕ್ಷಿಸಿದ ಮನೆಮಾಲೀಕ ಹಾವನ್ನು ಅಲ್ಲಿಯೇ ಬಿಟ್ಟು ತೆರಳುತ್ತಾನೆ. ಅಂತು ಇನ್ನೇನು ಹೆಬ್ಬಾವಿಗೆ ಆಹಾರವಾಗಬೇಕಿದ್ದ ಹಾವು ಮನೆ ಮಾಲೀಕನ ಸಮಯಪ್ರಜ್ಞೆಯಿಂದ ಬದುಕುಳಿದಿದೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ನ್ಯೂಸ್ ಡೆಸ್ಕ್..
PublicNext
24/07/2022 11:09 pm