ವರದಿ- ಈರನಗೌಡ ಪಾಟೀಲ
ಹಾವೇರಿ: ತುಂಬಿ ಹರಿಯುತ್ತಿರುವ ನದಿಯಾದರೇನು? ಅಧಿಕಾರಿಗಳು ಡಂಗೂರ ಸಾರಿದರೇನು ಡೋಂಟ್ ಕೇರ್ ಎನ್ನುತ್ತಾನೆ ವಯಸ್ಸಾದ ಈ ಅಜ್ಜ. ಹಾವೇರಿ ತಾಲೂಕಿನ ಹಾಲಗಿ ಗ್ರಾಮದಲ್ಲಿ ವರದಾ ನದಿ ಈಗ ಉಕ್ಕಿ ಹರಿಯುತ್ತಿದೆ. ಅಧಿಕಾರಿಗಳು ತುಂಬಿ ಹರಿಯುತ್ತಿರುವ ನದಿಯ ಹತ್ತಿರ ಯಾರು ಹೋಗಬೇಡಿ ಎಂದು ಗ್ರಾಮದಲ್ಲಿ ಈಗಾಗಲೇ ಡಂಗೂರ ಸಾರಿದ್ದಾರೆ.
ಆದರೆ ಇಲ್ಲೊಬ್ಬ ಅಜ್ಜ ಅಧಿಕಾರಿಗಳು ಡಂಗೂರ ಸಾರಿದರೂ ಡೋಂಟ್ ಕೇರ್ ಎನ್ನದೇ ತುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ತನ್ನ ಹುಚ್ಚಾಟ ನಡೆಸಿದ್ದಾನೆ. ಯುವಕರು ಹುಬ್ಬೇರಿಸುವಂತೆ ನೀರಿನಲ್ಲಿ ಡೈವ್ ಹೊಡೆಯುತ್ತಾನೆ. ತುಂಬಿ ಹರಿಯುತ್ತಿರುವ ವರದಾ ನದಿಯ ನೀರಿನ ಮಟ್ಟವನ್ನ ಲೆಕ್ಕಿಸದೆ ತನ್ನಷ್ಟಕ್ಕೇ ತಾನು ಈಜಾಡುತ್ತಿದ್ದಾನೆ.
PublicNext
19/07/2022 08:21 pm