ನಿತ್ಯಾನಂದನೂ ಸತ್ತೇ ಹೋಗಿದ್ದಾನೆ ಎಂದು ಇಷ್ಟು ದಿನಗಳ ಕಾಲ ಸೋಶಿಯಲ್ ಮೀಡಿಯಾದಲ್ಲಿ ಬಹು ಚರ್ಚೆಯಾಗುತ್ತಿತ್ತು. ಇಂದು ಅದಕ್ಕೆಲ್ಲ ನಿತ್ಯಾನಂದನೇ ಫುಲ್ ಸ್ಟಾಪ್ ಇಟ್ಟಿದ್ದಾನೆ.
ತಿಂಗಳುಗಟ್ಟಲೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳದ ನಿತ್ಯಾನಂದ ಇಂದು ದಿಢೀರನೆ ಕಾಣಿಸಿಕೊಂಡಿದ್ದಾನೆ. ನಾನೇ ಪರಮಶಿವ ದೇವಮಾನವ ಎಂದು ಹೇಳಿಕೊಳ್ಳುವ ನಿತ್ಯಾನಂದ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ರಿಲೀಸ್ ಮಾಡಿ ನಾನು ಸತ್ತಿಲ್ಲ, ನಾನು ಬದುಕಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ.
ಇಷ್ಟು ದಿನಗಳ ಕಾಲ ನಾನೇ ಪರಮಶಿವ ದೇವಮಾನವ ಅಂತೆಲ್ಲ ಕಾಗೆ ಹಾರಿಸುತ್ತಿದ್ದ ಈ ಕಳ್ಳ ಸ್ವಾಮಿ ಈಗ ನಾನು ಅಪ್ಗ್ರೇಡ್ ಆಗಿದ್ದೇನೆ ಎಂದು ಪೋಸ್ಟ್ ಹಾಕಿದ್ದಾನೆ. ನನಗೆ ಹೊಸ ದೇಹ ಬಂದಿದೆ ಅಂತಲ್ಲ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದಾನೆ.ಇಷ್ಟು ದಿನಗಳ ಕಾಲ ಈ ಸ್ವಾಮಿ, ಅದು ಯಾವ ಪ್ಲಾನ್ ಹಾಕಿಕೊಂಡು ಕುಳಿತಿದ್ದನೋ ಏನೋ ಗೊತ್ತಿಲ್ಲ.ಇನ್ಮುಂದೆ ನಿತ್ಯಾನಂದನ ಹೊಸ ಅವತಾರ ಹೇಗಿರುತ್ತೋ ಕಾದುನೋಡಬೇಕು.
PublicNext
15/07/2022 08:09 pm