ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯರೇ ನೀವು ಸ್ಟ್ರಾಂಗ್ ಆದರೂ ಈ ವೀಡಿಯೋ ನೋಡಿ !

ಜಾನ್ಸಿ: ನಮಸ್ಕಾರ.. ನಿಮಗೆ ದ್ವಿಚಕ್ರ ವಾಹನ ಓಡಿಸೋಕೆ ಬರುತ್ತದೆಯೇ ? ಬಂದ್ರೆ ಚೆನ್ನಾಗಿಯೇ ಕಲಿತಿದ್ದೀರಾ ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅಂತಲೇ ಆದ್ರೆ, ಬೈಕ್ ಅನ್ನ ರಸ್ತೆ ಮೇಲೆ ಓಡಿಸೋಕೆ ಏನೂ ತೊಂದರೆ ಇಲ್ಲ. ಒಂದು ವೇಳೆ ನಿಮ್ಮ ಪ್ರಶ್ನೆ ನೋ ಅಂತಾ ಆದ್ರೆ, ಈ ವೀಡಿಯೋ ನೋಡಿ ಬಿಡಿ.

ಜಾನ್ಸಿಯಲ್ಲಿ ನಡೆದ ಘಟನೆ ವೀಡಿಯೋ ಇದು. ಇದರಲ್ಲಿ ಮಗಳಿಗೆ ಅಮ್ಮ ದ್ವಿಚಕ್ರವಾಹನ ಕಲಿಸುತ್ತಿದ್ದಾಳೆ. ಅಮ್ಮನಿಗೆ ಸರಿಯಾಗಿ ವಾಹನ ಓಡಿಸೋಕೆ ಬರ್ತದೋ ಇಲ್ವೋ. ಆದರೆ, ಮಗಳಿಗೆ ವಾಹನ ಓಡಿಸೋದನ್ನ ಕಲಿಸೋಕೆ ಮುಂದಾಗಿದ್ದಾಳೆ. ಆಗಲೇ ನೋಡಿ ಈ ಎಡವಟ್ಟು ಆಗಿದೆ.

ಫುಲ್ ಸ್ಪೀಡ್ ನಲ್ಲಿ ಅಮ್ಮ-ಮಗಳು ದ್ವೀಚಕ್ರ ವಾಹನ ಓಡಿಸಿಕೊಂಡು ಬರ್ತಾರೆ. ಆದರೆ, ಇವರಿಗೆ ವಾಹನ ಕಂಟ್ರೋಲಿಗೇನೆ ಸಿಗೋದಿಲ್ಲ. ಆಗ ರೋಡ್ ಪಕ್ಕದ ಅಂಗಡಿಯ ಮೆಟ್ಟಿಲಿಗೆ ಗುದ್ದಿಯೇ ಬಿಡ್ತಾರೆ ಈ ಮಹಿಳೆಯರು. ಇದರಿಂದ ಅಮ್ಮ-ಮಗಳು ಇಬ್ಬರೂ ಗಂಭೀರವಾಗಿಯೇ ಗಾಯಗೊಂಡಿದ್ದಾರೆ. ಇವರಿಗೆ ಮುಂದೇನ್ ಆಗಿದೆ ಅನ್ನೋದು ಗೊತ್ತಿಲ್ಲ. ಆದರೆ, ವೀಡಿಯೋ ಎಚ್ಚರಿಕೆ ವೀಡಿಯೋ ಆಗಿ ಈಗ ವೈರಲ್ ಆಗುತ್ತಲೇ ಇದೆ.

Edited By : Nagesh Gaonkar
PublicNext

PublicNext

30/05/2022 03:36 pm

Cinque Terre

46.7 K

Cinque Terre

2

ಸಂಬಂಧಿತ ಸುದ್ದಿ