ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ವರ್ಷದ ಬಳಿಕ ಮರಳಿ ಸಿಕ್ಕಿತ್ತು ಶ್ವಾನ : ಹೃದಯಸ್ಪರ್ಶಿ ವಿಡಿಯೋ ವೈರಲ್

ಕೆಲವು ಸಂದರ್ಭಗಳಲ್ಲಿ ನಾವು ಕಳೆದುಕೊಂಡ ವಸ್ತುಗಳು ಮರಳಿ ಕೈ ಸೇರಿದಾಗ ಆಗುವ ಆನಂದಕ್ಕೆ ಪಾರವೇ ಇರಲ್ಲಾ. ಅದರಲ್ಲೂ ವ್ಯಕ್ತಿ, ಇಷ್ಟದ ಪ್ರಾಣಿ ನಮ್ಮನ್ನು ಅಗಲಿವೆ ಅವು ಮರಳಿ ಬರಲ್ಲಾ ಎಂದು ನೊಂದ ಮನಸ್ಸಿಗೆ ಅವುಗಳು ಕಣ್ಣು ಮುಂದೆ ಬಂದಾಗ ಆಗುವ ಆನಂದವೇ ಬೇರೆ.

ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ 5 ವರ್ಷದ ಬಳಿಕ ಕಳೆದುಹೋದ ನೆಚ್ಚಿನ ನಾಯಿವೊಂದು ಮರಳಿ ಮಾಲೀಕರ ಮಡಿಲು ಸೇರಿದೆ.

ಈ ಪುನರ್ಮಿಲನದ ದೃಶ್ಯ ಹೃದಯ ಕರಗಿಸುವಂತಿದೆ. ಮುದ್ದು ಶ್ವಾನಗಳು ಮನುಷ್ಯರ ಒಳ್ಳೆಯ ಸ್ನೇಹಿತರು. ಅವುಗಳ ಮುಗ್ಧ ಪ್ರೀತಿ ಮನಸ್ಸಿಗೆ ಆಹ್ಲಾದಕರ.

ಒಂದೊಮ್ಮೆ ತಮ್ಮ ಮುದ್ದಿನ ಶ್ವಾನಗಳು ಕಾಣೆಯಾದರಂತು ಅಕ್ಷರಶಃ ಮನೆ ಮಕ್ಕಳು ನಾಪತ್ತೆಯಾದಷ್ಟೇ ದುಃಖ ಮಾಲಿಕರಿಗೆ ಆಗುತ್ತದೆ. ಹೀಗೆ ನಾಪತ್ತೆಯಾದ ನಾಯಿ ಬಹುದಿನಗಳ ಬಳಿಕ ಸಿಕ್ಕಾಗ ಆ ಕ್ಷಣ ಹೇಗಿತ್ತು ನೀವೆ ನೋಡಿ.

ಸದ್ಯ ಈ ವಿಡಿಯೋವನ್ನು @GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು ಭಾರೀ ವೈರಲ್ ಆಗುತ್ತಿದೆ.

Edited By :
PublicNext

PublicNext

13/04/2022 05:44 pm

Cinque Terre

38.3 K

Cinque Terre

1

ಸಂಬಂಧಿತ ಸುದ್ದಿ