ಪ್ರತಿಯೊಬ್ಬರು ಒಂದಿಲ್ಲೊಂದು ಸಮಯದಲ್ಲಿ ಕೈಯಲ್ಲಿರುವ ವಸ್ತುವನ್ನು ಮರೆತು ಮನೆಯಲ್ಲಾ ಹುಡುಕಿತ್ತೇವೆ.
ಉದಾಹರಣೆಗೆ ಕಿಸೆಯಲ್ಲಿ ಪರ್ಸ್ ಇದ್ದರೂ ಮರೆತು ಹೋಗಿ ಪರ್ಸ್ ಹುಡುಕಿದ್ದು, ಕನ್ನಡಕ್ಕ ತಲೆ ಮೇಲೆ ಇಟ್ಟುಕೊಂಡು ಕೋಣೆಯಲ್ಲಿ ಹುಡುಕುವುದು,ಅದೇ ರೀತಿ ಕೀ, ಕರ್ಚೀಫ್ ಹೀಗೆ ಸಾಕಷ್ಟು ವಸ್ತುಗಳನ್ನು ನಾವು ಹಿಡಿದುಕೊಂಡು ಹುಡುಕಿರುತ್ತೇವೆ.
ಸದ್ಯ ಇಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಮೊಬೈಲ್ ನಲ್ಲಿ ಬ್ಯುಜಿ ಇರುವ ಮಹಿಳೆಯೊಬ್ಬರು ಕಂದನನ್ನು ಕೈಯಲ್ಲಿ ಹಿಡಿದುಕೊಂಡು ಒಂದುಕ್ಷಣ ಮಗು ಎಲ್ಲಿ ಹೋಯಿತು ಎಂದು ತಡಕಾಡಿದ ಪರಿಯನ್ನು ಕಾಣಬಹುದು.
ಬಳಿಕ ಕೈಯಲ್ಲಿರುವ ಮಗು ಕಂಡು ನಸುನಕ್ಕಿದನ್ನು ಕಾಣಬಹದು. ಸದ್ಯ ಈ ವಿಡಿಯೋ ಬಾರೀ ವೈರಲ್ ಆಗುತ್ತಿದೆ.
PublicNext
28/03/2022 06:45 pm