ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುವ ಪೋಷಕರೇ ಸ್ವಲ್ಪ ಎಚ್ಚರ ವಹಿಸಿ ಇಲ್ಲವಾದರೆ ನಿಮ್ಮ ಕಂದನನ್ನು ಕಳೆದುಕೊಳ್ಳಬೇಕಾದ ಪ್ರಮೇಯ ಬಂದಿತ್ತು ಜೋಕೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೇ ಕೆಲ ಅಧಿಕಾರಿಗಳು ಕೆಲವು ವಿಡಿಯೋಗಳನ್ನು ಹಂಚಿಕೊಂಡು ಅರಿವು ಮೂಡಿಸಲು ಯತ್ನಸಿಸುತ್ತಿರುತ್ತಾರೆ.
ಸದ್ಯ ಇಂತಹದ್ದೇ ಒಂದು ವಿಡಿಯೋವನ್ನು ಹಂಚಿಕೊಂಡ ಐಪಿಎಸ್ ಅಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುವ ಪೋಷಕರಿಗೆ ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಹುಷಾರಾಗಿರುವಂತೆ ಸಲಹೆ ಕೊಟ್ಟಿದ್ದಾರೆ.
ವಿಡಿಯೋದಲ್ಲಿ ಕಾರಿನ ಹಿಂಬದಿ ಸೀಟ್ ನಲ್ಲಿ ಕುಳಿತ ಮಗುವೊಂದು ಅಚಾನಕ್ಕಾಗಿ ಕಾರಿನ ಡೋರ್ ತೆರೆದು ಇನ್ನೇನು ಬಿದ್ದು ಬಿಡುತ್ತದೆ ಎನ್ನುವಷ್ಟರಲ್ಲಿ ಕಾರ್ ಸ್ಟಾಪ್ ಆಗಿರುವುದನ್ನು ಕಾಣಬಹುದು. ಡೋರ್ ಲಾಕ್ ಬಗ್ಗೆ ಅಜಾಗರೂಕತೆ ವಹಿಸಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಅದೃಷ್ಟವಶಾತ ಅಪಾಯವೇನು ಸಂಭವಿಸಿಲ್ಲ. ಪೋಷಕರೇ ಇನ್ನಾದರೂ ಮಕ್ಕಳೊಂದಿಗೆ ಹೊರ ಹೋಗುವಾಗ ಎಚ್ಚರದಿಂದಿರಿ. ಆಗಾಗ್ಗೆ ಕಾರ್ ಡೋರ್ ಪರಿಶೀಲಿಸಿಕೊಳ್ಳಿ, ಚಾಲನಾ ಸಮಯದಲ್ಲಿ ಮಕ್ಕಳ ಮೇಲೆ ಹೆಚ್ಚು ಗಮನವಿರಲಿ ಮತ್ತು ಕಾಳಜಿ ವಹಿಸಿ.
PublicNext
18/03/2022 01:50 pm