ಇತ್ತೀಚೆಗೆ ವೈರಲ್ ಆದ ಕಚಾ ಬಾದಮ್ ಹಾಡು ಎಲ್ಲಿ ಹೋದರು ಅದರದ್ದೇ ಸೌಂಡು. ಒಬ್ಬ ಶೇಂಗಾ ಮಾರುವ ವ್ಯಕ್ತಿಯನ್ನು ಫೇಮಸ್ ಮಾಡಿದ ಈ ಹಾಡಿಗೆ ಹೆಜ್ಜೆ ಹಾಕದವರಿಲ್ಲ.
ಗಾಯಕ ಭುವನ್ ಬಡ್ಯಾಕರ್ ಅವರ ಈ ಹಾಡಿಗೆ ಜನ ಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ಹೆಜ್ಜೆ ಹಾಕಿ ಖುಷಿಪಡುತ್ತಿದ್ದಾರೆ.
ಸದ್ಯ ಶಾಲಾ ಬಾಲಕಿಯೋರ್ವಳು ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು ಐಎಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮುದ್ದು ಪುಟಾಣಿಯ ಕಚ್ಚಾ ಬಾದಾಮ್ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರ ಹೃದಯ ಗೆದ್ದಿದೆ.
PublicNext
15/03/2022 04:06 pm