ಧರೆಯ ಮೇಲೆ ಬದುಕಲು ಪ್ರತಿಯೊಂದು ಜೀವಿ ಕೂಡ ತನ್ನ ನಿತ್ಯದ ಹೋರಾಟ ನಡೆಸುತ್ತೆ. ಸದ್ಯ ವೈರಲ್ ಆಗಿರುವ ಈ ಚಿರತೆ ಬೇಟೆಯಾಡಲು ಎಷ್ಟೊಂದು ಚಾಕಚಕ್ಯತೆಯಿಂದ ಹೊಂಚು ಹಾಕಿದೆ ನೋಡಿ.
ಮರದ ಕೆಳಗೆ ಇದ್ದ ಜಿಂಕೆ ನೋಡಿದ ಚಿರತೆ ಮೆಲ್ಲಗೆ ನೆಲ ಹಿಡಿದು ಅದರತ್ತ ಹೋಗಿದೆ. ನಂತರ ಹಿಂಬದಿಯಿಂದ ಚಂಗನೇ ಜಿಗಿದು ಜಿಂಕೆಯ ಮೇಲೆ ದಾಳಿ ಮಾಡಿ ಬೇಟೆಯಾಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
27/01/2022 09:50 am