ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೋಪಾಲ್: ಹಾಡುತ್ತಾ, ಕುಣಿಯುತ್ತ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

ಭೋಪಾಲ್: ಸಾಮಾನ್ಯವಾಗಿ ಶವದ ಮೆರವಣಿಗೆ ವೇಳೆ ಕುಟುಂಬಸ್ಥರು, ಸಂಬಂಧಿಕರು ಕಣ್ಣೀರು ಹಾಕುತ್ತಾರೆ. ಆದರೆ ಈಗ ವಿಭಿನ್ನವಾಗಿ ಶವದ ಮೆರವಣಿಗೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದೇವಿಪುರದ ಭುವವಾಡ ಗ್ರಾಮದ 100 ವರ್ಷದ ಜಮ್ ಸಿಂಗ್ ಸಾವನ್ನಪ್ಪಿದ್ದು, ಈ ವೇಳೆ ಕುಟುಂಬಸ್ಥರು, ಗ್ರಾಮಸ್ಥರು ಅದ್ಧೂರಿಯಾಗಿ ಆತನ ಅಂತ್ಯಕ್ರಿಯೆ ನಡೆಸಿದ್ದಾರೆ. ಹಾಡುತ್ತಾ, ಕುಣಿಯುತ್ತ, ಮೃತದೇಹದ ಮೆರವಣಿಗೆ ನಡೆಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಜಮ್ ಸಿಂಗ್ ಕುಟುಂಬಸ್ಥರು ಉದ್ದೇಶಪೂರ್ವಕವಾಗಿ ಹೀಗೆ ಮೆರವಣಿಗೆ ಮಾಡಿಲ್ಲ. ಇದೊಂದು ಸಂಪ್ರದಾಯವಾಗಿದೆ. 100 ವರ್ಷಗಳನ್ನು ಪೂರೈಸಿ ಮರಣಹೊಂದಿದ ವ್ಯಕ್ತಿ ಅಥವಾ ಮಹಿಳೆಯನ್ನು ಹೀಗೆ ಮೆರವಣಿಗೆ ಮಾಡಲಾಗುತ್ತದೆ. ದೇಶದ ಕೆಲವೊಂದು ಪ್ರದೇಶಗಳ ಬುಡಕಟ್ಟು ಜನಾಂಗದಲ್ಲಿ ಈ ರೀತಿಯ ಸಂಪ್ರದಾಯವಿದೆ.

Edited By : Manjunath H D
PublicNext

PublicNext

25/01/2022 07:04 pm

Cinque Terre

111.07 K

Cinque Terre

3

ಸಂಬಂಧಿತ ಸುದ್ದಿ