ಮನೆಯೊಳಗೇನೆ ಗೇಟ್ ಬಳಿ ನಿಂತು ನಾಯಿಯೊಂದು ಬೊಗಳುತ್ತದೆ. ಆ ಕ್ಷಣವೇ ಗೇಟ್ ಹಾರಿ ಚಿರತೆಯೊಂದು ಮನೆಗೂ ನುಗ್ಗುತ್ತದೆ. ಮುಂದೆ ಆಗೋ ಅನಾಹುತ ನಿಜಕ್ಕೂ ಭಯಾನಕ.ಬನ್ನಿ ಹೇಳ್ತೀವಿ.
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇಡೀ ಕಾಡನ್ನ ನಾವೇ ಆವರಿಸಿದರೇ ಹೀಗೇ ಆಗೋದೋ ಏನೋ. ಹಸಿದ ಚಿರತೆಯೊಂದು ಮನೆ ಗೇಟ್ ಹಾರಿಕೊಂಡು ಮನೆಯೊಳಗೆ ನುಗ್ಗಿ ಬಂದಿದೆ.
ಬೊಗಳುತ್ತಿರೋ ನಾಯಿಯನ್ನೇ ಬಾಯಲ್ಲಿ ಕಚ್ಚಿಕೊಂಡು ಮತ್ತೆ ಕಂಪೌಡ್ ಹಾರಿ ಓಡಿ ಹೋಗಿದೆ. ಈ ಎಲ್ಲ ದೃಶ್ಯಗಳು ಮನೆಯ ಸಿಸಿಟಿವಿಯಲ್ಲಿ ಕ್ಯಾಪ್ಚರ್ ಆಗಿವೆ.
ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಈ ವೀಡಿಯೋವನ್ನ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 16 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನ ವೀಕ್ಷಿಸಿದ್ದಾರೆ. ಅದಕ್ಕೇನೆ ಈ ವೀಡಿಯೋ ವೈರಲ್ ಆಗುತ್ತಲೇ ಇದೆ.
PublicNext
25/12/2021 01:43 pm